ಮೈಸೂರು(26-02-2021): ತಮ್ಮ ಆತ್ಮಹತ್ಯೆ ಮಾಡಿಕೊಂಡ ಎಂದು ಮನನೊಂದು ಅಣ್ಣ ಕೂಡ ಆತ್ಮಹತ್ಯೆ ಮಾಡಿಕೊಂಡಿರುವ ದಯಾನೀಯ ಘಟನೆ ಹೆಚ್. ಡಿ. ಕೋಟೆಯಲ್ಲಿ ನಡೆದಿದೆ.
ಹರೀಶ್ (25) ಎಂಬಾತ ತಂದೆ ಮಾತಿಗೆ ಮುನಿಸಿಕೊಂಡು ಗುರುವಾರ ಬೆಳಗ್ಗೆ ಎಲೆಹುಂಡಿ ಸಮೀಪದ ಕೆರೆ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮ್ಮನ ಆತ್ಮಹತ್ಯೆಯ ಸುದ್ದಿ ತಿಳಿದ ಮೈಸೂರಿನಲ್ಲಿದ್ದ ವೆಂಕಟೇಶ್ (28) ಸರಗೂರು ಬಳಿಯ ಕೆರೆ ಕಡೆ ತೆರಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ.
ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ಹೆಚ್. ಡಿ. ಕೋಟೆಯಲ್ಲಿ ಸ್ಮಶಾನ ಮೌನ ಆವರಿಸಿದೆ.