ಮೈಸೂರು(10/10/2020): ಭಾಭಾ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಅಣುವಿಜ್ಞಾನಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಾಪತ್ತೆಯಾದ ಅಣು ವಿಜ್ಞಾನಿಯನ್ನು ಅಭಿಷೇಕ್ ರೆಡ್ಡಿ ಗುಲ್ಲಾ ಎಂದು ಗುರುತಿಸಲಾಗಿದೆ. 24 ವರ್ಷದ ಇವರು ಮೈಸೂರಿನ ಇಲವಾಲದಲ್ಲಿರುವ ಕಾವೇರಿ ಲೇಔಟ್ನಲ್ಲಿ ವಾಸವಾಗಿದ್ದರು.
ಭಾಭಾ ಪರಮಾಣು ಸಂಶೋಧನಾ ಸಂಸ್ಥೆಯಲ್ಲಿ ಕಳೆದ ಒಂದು ವರ್ಷದಿಂದ ಇವರು ಕೆಲಸ ಮಾಡುತಿದ್ದರು ಎನ್ನಲಾಗಿದೆ. ನಾಪತ್ತೆಯ ಕಾರಣ ಇನ್ನೂ ನಿಗೂಢವಾಗಿದೆ.