ವಿವಾಹಕ್ಕಾಗಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಯುವಕ| ಲವ್ ಜಿಹಾದ್ ಚರ್ಚೆ ಬೆನ್ನಲ್ಲೇ ಹೊರಬಿದ್ದ ಕೇಸ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಯಮುನಾನಗರ್(12-01-2020): ಮುಸ್ಲಿಂ ಯುವಕ ವಿವಾಹಕ್ಕಾಗಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದು, ಲವ್ ಜಿಹಾದ್ ಕುರಿತ ಚರ್ಚೆಯ ಬೆನ್ನಲ್ಲೇ ಪ್ರಕರಣ ಹೊರಬಿದ್ದಿದೆ.

ಈಗಾಗಲೇ ‘ಲವ್ ಜಿಹಾದ್’ ವಿರುದ್ಧ ಕಾನೂನು ರೂಪಿಸಲು ಹರಿಯಾಣ ಸರ್ಕಾರ ಮೂರು ಸದಸ್ಯರ ಸಮಿತಿ ರಚಿಸಿದೆ. ಈ ಮಧ್ಯೆ21 ವರ್ಷದ ಮುಸ್ಲಿಂ ಯುವಕ ತನ್ನ ಹೆಸರನ್ನು ಬದಲಾಯಿಸಿಕೊಂಡು ಹಿಂದೂ ಆಚರಣೆಗಳ ಪ್ರಕಾರ ನ.9ರಂದು ಹಿಂದೂ ಯುವತಿಯನ್ನು ವಿವಾಹವಾಗಿದ್ದರು.

ಬಳಿಕ ಕಾಯ್ದೆಯ ಭೀತಿಯಿಂದ ಹೈಕೋರ್ಟ್ ಗೆ ದಂಪತಿ ರಕ್ಷಣೆ ನೀಡುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹರ್ಯಾಣ ಹೈಕೋರ್ಟ್ ದಂಪತಿಗೆ ರಕ್ಷಣೆ ನೀಡುವಂತೆ ಸೂಚಿಸಿದೆ.

ಯಮುನಾನಗರ ಪೊಲೀಸ್ ವರಿಷ್ಠಾಧಿಕಾರಿ ಕಮಲ್ದೀಪ್ ಗೋಯಲ್ ಯುವತಿಯ ದಂಪತಿಗೆ ಅಭಯವನ್ನು ನೀಡಿದ್ದಾರೆ. ಇಬ್ಬರು ಕಾನೂನು ಪ್ರಕಾರ ವಿವಾಹವಾಗಿರುವುದಾಗಿ ಯುವತಿಯ ಕುಟುಂಬಸ್ಥರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು