ಕೇರಳ(24-11-2020): ಮಲಪ್ಪುರಂ ಜಿಲ್ಲೆಯ ವಂದೂರು ಗ್ರಾಮ ಪಂಚಾಯಿತಿಯ ಎಮಾಂಗಡ್ ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮೂಲದ ಕುಟುಂಬದಿಂದ ಯುವತಿಯೋರ್ವಳು ನಾಮಪತ್ರ ಸಲ್ಲಿಸಿದ್ದು, ಚರ್ಚೆಗೆ ಗ್ರಾಸವಾಗಿದೆ.
ಸಲ್ಫಾತ್ ಎಮಾಂಗಡ್ ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಐಯುಎಂಎಲ್ ಬೆಂಬಲಿಗರು ಮತ್ತು ಎಡಪಕ್ಷಗಳಲ್ಲಿದ್ದವರು. ಆದರೆ ಮೋದಿ ಜಾರಿಗೆ ತಂದ ಟ್ರಿಪಲ್ ತಲಾಖ್ ನಿಷೇಧದಿಂದಾಗಿ ಪ್ರಭಾವಿತೆಯಾಗಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ನಾನು 10 ನೇ ತರಗತಿ ಮುಗಿಸಿದ ನಂತರ 15 ವರ್ಷ ವಯಸ್ಸಿನಲ್ಲಿ ಮದುವೆಯಾಗಿದ್ದೆ. ಇದೇ ರೀತಿಯ ಪರಿಸ್ಥಿತಿಯಲ್ಲಿರುವ ಮಹಿಳೆಯರು ಅನುಭವಿಸಬೇಕಾದ ತೊಂದರೆಗಳು ನನಗೆ ತಿಳಿದಿದೆ. ಆದ್ದರಿಂದ ಟ್ರಿಪಲ್ ತಲಾಖ್ ನ್ನು ಹೊರತುಪಡಿಸಿ, ಮಹಿಳೆಯರ ಮದುವೆ ವಯಸ್ಸನ್ನು 21 ಕ್ಕೆ ಹೆಚ್ಚಿಸಲು ಮೋದಿಜಿ ಮುಂದಾಗಿದ್ದಾರೆ ಎನ್ನುವುದು ನನಗೆ ಬಿಜೆಪಿಯಿಂದ ಸ್ಪರ್ಧೆಗಿಳಿಯುವಂತೆ ಮಾಡಿದೆ ಎಂದು ಸಲ್ಫತ್ ಹೇಳಿದ್ದಾರೆ.