ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಸಮಿತಿಯಿಂದ ‘ಲೀಡ್ ಫಾರ್ ನೀಡ್’ ಕಾರ್ಯಾಗಾರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಡಿಕೇರಿ(10/10/2020): ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಸಮಿತಿ ಆಯೋಜಿಸಿದ ಲೀಡ್ ಫಾರ್ ನೀಡ್ ಕಾರ್ಯಾಗಾರವು ಕೊಡಗು ಮರ್ಕಝ್ ಸಭಾಂಗಣದಲ್ಲಿ ಜರುಗಿತು.

ಜಿಲ್ಲಾ ಹಾಗೂ ತಾಲೂಕು ನಾಯಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಸಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ (ಕಿಲ್ಲೂರು ತಂಙಳ್ ) ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಕಾನೂನು ಸಲಹೆಗಾರರಾದ ವಕೀಲ ಕೆ.ಎಂ ಕುಂಞಬ್ಬುಲ್ಲ ಮಡಿಕೇರಿ ಸಭೆಯನ್ನು ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಾಜ್ಯ ಪ್ರಧಾನ ಕಾರ್ಯದರ್ಶಿ NKM ಶಾಫಿ ಸಅದಿ ಬೆಂಗಳೂರು ವಿಷಯ ಮಂಡನೆ ನಡೆಸಿದರು.

ಮುಂದಿನ ಯೋಜನೆಗಳ ಕುರಿತು ಮಾಹಿತಿ ನೀಡಿದ ಸಂಚಾಲಕ ಅಬ್ದುಲ್ ಹಫೀಳ್ ಸ‌ಅದಿ ಕೊಳಕೇರಿ ಬ್ಲಾಕ್ ಹಾಗೂ ಗ್ರಾಮ ಸಮಿತಿಗಳನ್ನು ಕಾರ್ಯರೂಪಕ್ಕೆ ತರುವ ಕುರಿತು ಮಾಹಿತಿ ನೀಡಿದರು.

ಅಗಲಿದ ನಾಯಕರಾದ ತಾಜುಲ್ ಫುಕಹಾಅ್ ಬೇಕಲ್ ಉಸ್ತಾದ್, ಪಿ.ಎಂ ಅಲಿ ಉಸ್ತಾದ್ ಎಮ್ಮೆಮಾಡು ಸೇರಿದಂತೆ ಅನೇಕ ನಾಯಕರು, ಕಾರ್ಯಕರ್ತರಿಗೆ ತಹ್ಲೀಲ್ ಸಮರ್ಪಣೆ ಹಾಗೂ ಪ್ರಾರ್ಥನೆ ನಡೆಸಲಾಯಿತು. ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಶುಭಹಾರೈಸಿದರು.

ಸಭೆಯಲ್ಲಿ ಕೊಡಗು ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಎ ಮೂಸ ಸಖಾಫಿ ಕೊಂಡಂಗೇರಿ, ಪ್ರಧಾನ ಕಾರ್ಯದರ್ಶಿ ಎ.ಎ ಮುಹಮ್ಮದ್ ಹಾಜಿ ಕುಂಜಿಲ, ವಿರಾಜಪೇಟೆ ತಾಲೂಕು ಅಧ್ಯಕ್ಷ ಎಸ್.ಹೆಚ್ ಮುಹಿಯುದ್ದೀನ್, ಮಡಿಕೇರಿ ತಾಲೂಕು ಅಧ್ಯಕ್ಷ ಎ.ಎಂ ಅಬೂಬಕ್ಕರ್ ಹಾಜಿ, ಎಸ್ ವೈಎಸ್ ಜಿಲ್ಲಾಧ್ಯಕ್ಷ ಅಬ್ದುಲ್ಲ ಸಖಾಫಿ ಕೊಳಕೇರಿ, ಸಯ್ಯಿದ್ ಇಲ್ಯಾನ್ ಅಲ್ ಹೈದ್ರೋಸಿ, ಸಿ.ಕೆ ಅಹ್ಮದ್ ಹಾಜಿ,  ಖಾಸಿಂ ಸಖಾಫಿ, ಎಂ.ಬಿ ಹಮೀದ್, ಮುಬಶ್ಶಿರ್ ಅಹ್ಸನಿ ಸೇರಿದಂತೆ ಪ್ರಮುಖರು ಭಾಗವಹಿಸಿದರು.

ಹನೀಫ್ ಸಖಾಫಿ ಕೊಂಡಂಗೇರಿ ಸ್ವಾಗತಿಸಿ, ಉಮರ್ ಸಖಾಫಿ ಎಡಪ್ಪಾಲ ವಂದಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು