ಹಿಂದೂ ದೇವತೆಗಳ ಹೆಸರಿನ ಪಟಾಕಿಗಳನ್ನು ಮಾರಾಟಮಾಡದಂತೆ ಮುಸ್ಲಿಂ ಅಂಗಡಿಗೆ ನುಗ್ಗಿ ಬೆದರಿಕೆ ಹಾಕಿದ ದುಷ್ಕರ್ಮಿಗಳು|

Muslim Shopkeepers Threatened
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಧ್ಯಪ್ರದೇಶ(07-11-2020): ಹಿಂದೂ ದೇವತೆಗಳ ಹೆಸರಿನ ಪಟಾಕಿಗಳನ್ನು ದಾಸ್ತಾನು ಮಾಡಿ ಮಾರಾಟ ಮಾಡಿದ್ದಕ್ಕಾಗಿ ಮಧ್ಯಪ್ರದೇಶದ ದೇವಾಸ್‌ನಲ್ಲಿರುವ ಮುಸ್ಲಿಂ ಅಂಗಡಿಗೆ ನುಗ್ಗಿದ ಕೆಲ ದುಷ್ಕರ್ಮಿಗಳು ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಕುರಿತ ವಿಡಿಯೋ ಕೂಡ ವೈರಲ್ ಆಗಿದೆ.

ವಿಡಿಯೋದಲ್ಲಿ ಕೆಲವರು ಕೇಸರಿ ಬಣ್ಣದ ಶಿರೋವಸ್ತ್ರಗಳನ್ನು ಕುತ್ತಿಗೆಗೆ ಸುತ್ತಿಕೊಂಡಿದ್ದಾರೆ – ಅಂಗಡಿಯೊಳಗಡೆ ಅಡ್ಡಾಡುತ್ತಾರೆ.  ಅಂಗಡಿಯಲ್ಲಿ ಇಂತಹ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ಮುಂದುವರಿಸಿದರೆ ಭೀಕರ ಪರಿಣಾಮಗಳ ಎದುರಿಸಬೇಕಾಗುತ್ತದೆ ಎಂದು ಮಾಲಕರಿಗೆ ಎಚ್ಚರಿಕೆ ನೀಡುತ್ತಾರೆ.

ಮುಸ್ಲಿಂ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು ಒಂದು ಲಕ್ಷ್ಮಿ ಬಾಂಬ್ ಅಥವಾ ಗಣೇಶ್ ಬಾಂಬ್ ಮಾರಾಟವಾದರೆ,   ಬಿಡಲ್ಲ  ಎಂದು ಬೆದರಿಕೆ ಹಾಕಿದ್ದಾರೆ. ಈ ವೇಳೆ ಅಂಗಡಿ ಮಾಲಕ ಏನೂ ಮಾಡದಂತೆ ಬೇಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

ದುಷ್ಕರ್ಮಿಗಳಲ್ಲಿ ಓರ್ವ ಫ್ರೆಂಚ್ ಪ್ರಕಟಣೆ ಪ್ರಕಟಿಸಿದ ಪ್ರವಾದಿ ಮೊಹಮ್ಮದ್ ಅವರ ವ್ಯಂಗ್ಯಚಿತ್ರವನ್ನು ಉಲ್ಲೇಖಿಸುತ್ತಾನೆ. ಆ ಬಳಿಕ ಉಂಟಾದ ಪರಿಸ್ಥಿತಿಯ ಬಗ್ಗೆ ಕೂಡ ಉಲ್ಲೇಖಿಸಿದ್ದಾನೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು