ಬೆಂಗಳೂರು (09-12-2020): ಭಾರತದಲ್ಲಿ ಧರ್ಮ ಮತ್ತು ಜಾತಿ ಆಧಾರಿತ ವಿಭಜನೆ ಹೆಚ್ಚುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಮುಸಲ್ಮಾನರೊಬ್ಬರು ಹೊಸಕೋಟೆ ತಹಸಿಲ್ನ ಭಗವಾನ್ ಹನುಮಾನ್ ದೇವಸ್ಥಾನಕ್ಕೆ 50 ಲಕ್ಷ ರೂ.ಮೌಲ್ಯದ ಭೂಮಿಯನ್ನು ದಾನವಾಗಿ ಕೊಟ್ಟು ದೇಶವೇ ತಿರುಗಿ ನೋಡುವಂತೆ ಮಾಡಿದ್ದಾರೆ.
ಎಚ್ಎಂಜಿ ಬಾಷಾ ಎಂಬ ವ್ಯಕ್ತಿ ಹನುಮಾನ್ ದೇವಾಲಯದ ನಿರ್ಮಾಣಕ್ಕಾಗಿ 1.5 ‘ಗುಂಟಾ’ (1 ಗುಂಟಾ 1,089 ಚದರ ಅಡಿ) ಭೂಮಿಯನ್ನು ದಾನ ಮಾಡಿದ್ದಾರೆ. ಈ ದೇವಾಲಯವು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿನ ಬೆಂಗಳೂರು- ಚೆನ್ನೈ ಹೊಸಕೋಟೆ ಸಂಪರ್ಕ ರಸ್ತೆಯಲ್ಲಿದೆ.
ಎಎನ್ಐ ಜೊತೆ ಮಾತನಾಡಿದ ಬಾಷಾ, ದೇವಾಲಯವು ಚಿಕ್ಕದಾಗಿದ್ದರಿಂದ ಪ್ರಾರ್ಥನೆ ಸಲ್ಲಿಸುವಾಗ ಅನೇಕ ಜನರು ಹೆಣಗಾಡುತ್ತಿರುವುದನ್ನು ನಾನು ನೋಡುತ್ತಿದ್ದೆ. ಆದ್ದರಿಂದ, ನನ್ನ ಜಮೀನಿನ ಒಂದು ಭಾಗವನ್ನು ದಾನ ಮಾಡಲು ನಿರ್ಧರಿಸಿದೆ. ನನ್ನ ಕುಟುಂಬ ಸದಸ್ಯರು ಎಲ್ಲರೂ ಇದಕ್ಕೆ ಒಪ್ಪಿದರು. ಇದು ಸಮಾಜಕ್ಕೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ದೇವಾಲಯ ನಿರ್ಮಾಣಕ್ಕಾಗಿ ಎಚ್ಎಂಜಿ ಬಾಷಾ ಭೂಮಿಯನ್ನು ಪೂರ್ಣ ಹೃದಯದಿಂದ ದಾನ ಮಾಡಿದರು. ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿದೆ. ನಾವು ತುಂಬಾ ಸಂತೋಷವಾಗಿದ್ದೇವೆ ಮತ್ತು ಬಾಷಾ ದೇವಾಲಯ ನಿರ್ಮಿಸಲು ಇಷ್ಟು ಭೂಮಿಯನ್ನು ದಾನ ಮಾಡಿರುವುದು ಅವರ ಶ್ರೇಷ್ಠತೆಯಾಗಿದೆ ಎಂದು ಗೌಡ ಹೇಳಿದರು.
ಬಾಷಾ ದಾನವನ್ನು ಶ್ಲಾಘಿಸುವ ಪೋಸ್ಟರ್ ಅನ್ನು ಮುಖ್ಯ ರಸ್ತೆಯ ಪಕ್ಕದಲ್ಲಿ ಗ್ರಾಮಸ್ಥರು ಹಾಕಿದ್ದಾರೆ. ದೇಶದಲ್ಲಿ ಧರ್ಮದ ಹೆಸರಿನಲ್ಲಿ ಮನಸ್ಸುಗಳನ್ನು ಒಡೆಯಲು ಯತ್ನಿಸುತ್ತಿರುವ ಈ ಸನ್ನಿವೇಶದಲ್ಲಿ ಭಾಷಾ ಕಾರ್ಯ ನಿಜಕ್ಕೂ ಶ್ಲಾಘನೀಯ.