ಮುಸ್ಲಿಂ – ಅಮೇರಿಕನ್ ವ್ಯಕ್ತಿಯನ್ನು ಫೆಡರಲ್ ನ್ಯಾಯಾಧೀಶರನ್ನಾಗಿ ನೇಮಿಸಲು ಸೆನೆಟ್ ಅನುಮೋದನೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಟ್ರೆಂಟೋನ್: ಮುಸ್ಲಿಂಅಮೇರಿಕನ್ ವ್ಯಕ್ತಿಯನ್ನು ಫೆಡರಲ್ ನ್ಯಾಯಾಧೀಶನನ್ನಾಗಿ ಮಾಡಲು ಅಮೇರಿಕಾದ ಸೆನೆಟ್ ಅನುಮೋದನೆ ನೀಡಿದೆ.

ಅಮೆರಿಕದ ಡಿಸ್ಟ್ರಿಕ್ಟ್ ಕೋರ್ಟ್ ಆಫ್ ನ್ಯೂಜೆರ್ಸಿಯ ನ್ಯಾಯಾಧೀಶರಾಗಿ ಅಮೇರಿಕನ್ ಮುಸ್ಲಿಂ ಆಗಿರುವ ಝಹೀದ್‌ ಖುರೈಷಿ ನೇಮಕವಾಗಲಿದ್ದಾರೆ. ಸದ್ಯ ಇವರು ನ್ಯೂಜೆರ್ಸಿಯ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪಾಕಿಸ್ತಾನ ಮೂಲದವರಾದ ಝಹೀದ್‌ ಖುರೈಷಿ ಡಿಸ್ಟ್ರಿಕ್ಟ್ ಕೋರ್ಟ್‍ (ಫೆಡರಲ್) ನ್ಯಾಯಾಧೀಶರಾಗಿ ನೇಮಕವಾದ ಅಮೇರಿಕಾದ ಮೊದಲ ಮುಸ್ಲಿಂ ಆಗಿರುತ್ತಾರೆ. ಸೆನೆಟ್ ನಲ್ಲಿ ನಡೆದ ಮತದಾನದಲ್ಲಿ 81 -16 ಅಂತರದಲ್ಲಿ ಖುರೈಷಿ ನೇಮಕಗೊಂಡಿದ್ದು, 34 ರಿಪಬ್ಲಿಕನ್ನರೂ ಕೂಡಾ, ಡೆಮೋಕ್ರಟಿಕರೊಂದಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು