ಉತ್ತರಪ್ರದೇಶ(22-10-2020): ಗಡ್ಡ ಬಿಟ್ಟ ಕಾರಣಕ್ಕೆ ಮುಸ್ಲಿಂ ಸಬ್ ಇನ್ಸ್ ಪೆಕ್ಟರನ್ನು ಕರ್ತವ್ಯದಿಂದ ವಜಾಮಾಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
3 ವರ್ಷಗಳಿಂದ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಂತೆಸರ್ ಅಲಿ ಎಂಬವರು ಉದ್ದನೆಯ ದಾಡಿ ಬಿಟ್ಟಿದ್ದ ಕಾರಣಕ್ಕೆ ಬಾಘ್ಪಟ್ನ ಎಸ್ಪಿ ಅಭಿಷೇಕ್ ಸಿಂಗ್ ಅಮಾನತು ಮಾಡಿದ್ದಾರೆ.
ಇಂತೆಸರ್ ಅಲಿ ಎಂಬವರು ಉದ್ದನೆಯ ದಾಡಿ ಬಿಟ್ಟಿದ್ದರು. ಗಡ್ಡ ಬೋಳಿಸಿಕೊಂಡು ಬರುವಂತೆ ಅಥವಾ ಗಡ್ಡ ಉಳಿಸಿಕೊಳ್ಳಲು ಮೇಲಧಿಕಾರಿಗಳ ಅನುಮತಿ ಪಡೆಯಲಿಲ್ಲ ಎಂದು ಎಸ್ ಪಿ ಅವರ ವಿರುದ್ಧ ಆಪಾದನೆಯನ್ನು ಮಾಡಿದ್ದಾರೆ.