ಮುಷ್ಕರ ಮಾಡದಂತೆ ನನಗೆ ಕೂಡಿ ಹಾಕಿದ್ದಾರೆ: ಉಡುಪಿ KSRTC ಮೆಕ್ಯಾನಿಕ್ ಕಣ್ಣೀರು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಉಡುಪಿ: ನನಗೆ ಪ್ರತಿಭಟನೆ ಮಾಡಲು ಬಿಡುತ್ತಿಲ್ಲ. ನನ್ನನ್ನು ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಕೂಡಿ ಹಾಕಿದ್ದಾರೆ. ನಾನು ಕೆಎಸ್ಆರ್ ಟಿಸಿ ನಂಬಿಕೊಂಡು ಬಂದಿದ್ದೇನೆ. ನನ್ನ ಹತ್ತಿರ ಕಾಸಿಲ್ಲ, ನಾನು ಬಡವ, ಕಾಸಿದ್ದರೆ ಎಂಎಲ್‌ಎ ಆಗುತ್ತಿದ್ದೆ, ಹೀಗಾಗಿ ನಾನು ಮೆಕ್ಯಾನಿಕ್ ಆಗಿದ್ದೇನೆ. ನಮ್ಮ ಕಷ್ಟ ಈ ರಾಜಕಾರಣಿಗಳಿಗೆ ಅರ್ಥ ಆಗಲ್ಲ, ಸರ್ಕಾರ ಅರ್ಥ ಮಾಡಿಕೊಂಡು ಸಂಬಳ ಹೆಚ್ಚಿಸಬೇಕು ಎಂದು ಉಡುಪಿಯ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಶ್ರೀಕಾಂತ್ ರೆಡ್ಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಣ್ಣೀರಿಟ್ಟಿದ್ದಾರೆ.

ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪರಿಷ್ಕರಣೆ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ಸಾರಿಗೆ ನಿಗಮದ ನೌಕರರು ಇಂದು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ನೀಡಿದರು, ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಚಾಲಕರು ಮತ್ತು ನಿರ್ವಾಹಕರು ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದರೆ, ಇತ್ತ ಉಡುಪಿಯಲ್ಲಿ ಕೆಎಸ್‌ಆರ್‌ಟಿಸಿ ಮೆಕ್ಯಾನಿಕ್ ಒಬ್ಬರನ್ನು ಕೂಡಿ ಹಾಕಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.

ಈ ಕುರಿತು ತಮ್ಮ ಅಳಲನ್ನು ತೋಡಿಕೊಳ್ಳುವ ಬಸ್ ಡೀಪೋದಲ್ಲಿ ಕೆಲಸ ನಿರ್ವಹಿಸುವ ಮೆಕ್ಯಾನಿಕ್ ಒಬ್ಬರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಾಸಕರು ನಮ್ಮ ಸೇವೆ ಮಾಡಲು ಇದ್ದಾರೆ, ನಮ್ಮಿಂದಲೇ ಗೆದ್ದಿದ್ದಾರೆ ಆದರೆ ಈಗ ನಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ, ನಮ್ಮಂತಹ ಬಡ ನೌಕರರ ಕಷ್ಟ ಅರ್ಥ ಆಗುವುದಿಲ್ಲ ಎಂದು ಉಡುಪಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುವ ಶ್ರೀಕಾಂತ್ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿ ಕಣ್ಣೀರು ಹಾಕಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು