ಮುಷ್ಕರ ಬೆಂಬಲಿಸಿದ ತರಬೇತಿ ನಿರತ ಬಿಎಂಟಿಸಿ ನೌಕರರ ವಜಾ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲ ಸೂಚಿಸಿರುವ ತರಬೇತಿ ನಿರತ ಬಿಎಂಟಿಸಿ ನೌಕರರನ್ನು ವಜಾ ಮಾಡಲಾಗಿದೆ.

ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗುವಂತೆ ಬಿಎಂಟಿಸಿ ನೋಟಿಸ್ ನೀಡಿತ್ತು. ಆದರೂ ಹಾಜರಾಗದ ತರಬೇತಿ ನಿರತ ನೌಕರರನ್ನ ವಜಾ ಮಾಡಲಾಗಿದೆ ಎಂದು ಬಿಎಂಟಿಸಿ ಸ್ಪಷ್ಠೀಕರಣ ನೀಡಿದೆ.

ಸಾರಿಗೆ ನಿಗಮಗಳ ನಿಯಮಗಳ ಪ್ರಕಾರ ಸೂಕ್ತ ಕಾರಣಗಳಿಲ್ಲದೇ ಕೆಲಸಕ್ಕೆ ರಜೆ ಹಾಕುವಂತಿಲ್ಲ. ಮುಷ್ಕರದಲ್ಲಿ ಭಾಗವಹಿಸುವಂತಿಲ್ಲ. ಹಾಗಾಗಿ ಸದ್ಯ ತೊಂಭತ್ತಾರು ನೌಕರರನ್ನು ವಜಾ ಮಾಡಲಾಗಿದೆ.

ಇನ್ನೂ 1400 ತರಬೇತಿ ನಿರತ ನೌಕರರು ಇದ್ದಾರೆ. ಅವರೆಲ್ಲರೂ ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು. ಇಲ್ಲದಿದ್ದರೆ ಅವರನ್ನೂ ವಜಾ ಮಾಡಲಾಗುವುದು ಎಂದು ಬಿಎಂಟಿಸಿ ಎಚ್ಚರಿಕೆ ನೀಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು