ಮೂರು ಕ್ಷೇತ್ರಗಳ ಉಪಚುನಾವಣೆಗೆ ‘ಕೈ’ ಟಿಕೇಟ್ ಫೈನಲ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಎಪ್ರಿಲ್ 17 ರಂದು ರಾಜ್ಯದಲ್ಲಿ ತೆರವಾದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯ ದಿನಾಂಕ ಪ್ರಕಟವಾದ ಬೆನ್ನಲ್ಲೇ ರಾಜಕೀಯ ಪಕ್ಷಗಳ ಚಿತ್ತ ಚುನಾವಣೆಯತ್ತ ಇದೆ. ಹಲವಾರು ಟಿಕೇಟ್ ಆಕಾಂಕ್ಷಿಗಳ ಬಿರುಸಿನ ಪ್ರಚಾರ ಕೂಡ ಶುರುಮಾಡಿದ್ದಾರೆ.

ಯಾವ ಕ್ಷೇತ್ರಕ್ಕೆ ಯಾರಿಗೆ ಟಿಕೇಟ್ ಎನ್ನುವುದು ಹಲವರಿಗೆ ಕುತೂಹಲವಿತ್ತು. ಬಿಜೆಪಿ, ಜೆಡಿಎಸ್ ಪಕ್ಷಗಳು ಇನ್ನೂ ಟಿಕೇಟ್ ಘೋಷಣೆ ಮಾಡಿಲ್ಲ.
ಆದರೆ ಎಐಸಿಸಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶ್ರೀಮತಿ ಸೋನಿಯಾ ಗಾಂಧಿ ಇಂದು ಮೂರು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಬೀದರ್ ಜಿಲ್ಲೆ ಬಸವಕಲ್ಯಾಣ ಕ್ಷೇತ್ರದಲ್ಲಿ ಶಾಸಕರಾಗಿದ್ದ ದಿ.ಬಿ.ನಾರಾಯಣರಾವ್ ಪತ್ನಿ ಮಲ್ಲಮ್ಮಗೆ, ಮಸ್ಕಿ ಕ್ಷೇತ್ರದಲ್ಲಿ ಬಸವನಗೌಡ ಟಿ.ತುರುವಿಹಾಳಗೆ ಹಾಗೂ ಸಿಂದಗಿ ಕ್ಷೇತ್ರದಲ್ಲಿ ಅಶೋಕ ಮನಗೂಳಿ ಅವರಿಗೆ ‘ಕೈ’ ಟಿಕೇಟ್ ಫೈನಲ್ ಆಗಿದೆ. ಸಿಂದಗಿ ಕ್ಷೇತ್ರದ ಬೈ ಎಲೆಕ್ಷನ್ ಗೆ ದಿನಾಂಕ ಪ್ರಕಟವಾಗದಿದ್ದರೂ ಅಭ್ಯರ್ಥಿ ಫೈನಲ್ ಮಾಡಿದ ಕಾಂಗ್ರೆಸ್, ಬೆಳಗಾವಿ ಉಪಚುನಾವಣೆಗೆ ದಿನಾಂಕ ಪ್ರಕಟವಾದರೂ ಇನ್ನೂ ಟಿಕೇಟ್ ಘೋಷಣೆ ಮಾಡಿಲ್ಲ.

ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಬೈ ಎಲೆಕ್ಷನ್ ಗೆ ಮಾರ್ಚ್‌ 30 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಮಾರ್ಚ್‌ 31ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್‌ 3 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಲಿದೆ. ಮೇ 2 ರಂದು ಮತ ಎಣಿಕೆ ಇದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು