ಬೆಂಗಳೂರು 20/10/2020: ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಅಕ್ರಮ ವೋಟರ್ ಐಡಿ ಸಂಗ್ರಹಿಸಿದ ಆರೋಪವನ್ನು ಕಾಂಗ್ರೆಸ್ ಹೊರಿಸಿದೆ. ಈ ಸಂಬಂಧ ಕಾಂಗ್ರೆಸ್ ಚುನಾವಣೆ ಆಯೋಗಕ್ಕೆ ದೂರು ನೀಡಿದೆ.
“ಮುನಿರತ್ನ ಅವರು ಅಕ್ರಮವಾಗಿ ವೋಟರ್ ಐಡಿ ಸಂಗ್ರಹಿಸಿದ್ದಾರೆ. ತಲಾ 5 ಸಾವಿರ ರೂಪಾಯಿ ಕೊಟ್ಟು ಓಟರ್ ಐಡಿ ಸಂಗ್ರಹಿಸುತ್ತಿದ್ದಾರೆ” ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ಹಿಂದೆ 2018ರ ವಿಧಾನಸಬಾ ಚುನಾವಣೆ ವೇಳೆಯೂ ಮುನಿರತ್ನ ಅವರ ಬಳಿ ಅಕ್ರಮ ವೋಟರ್ ಐಡಿ ಕಾರ್ಡು ಪತ್ತೆಯಾಗಿದ್ದವು ಎಂದು ಬಿಜೆಪಿ ಆರೋಪಿಸಿತ್ತು. ಈ ಪ್ರಕರಣ ಹೈಕೋರ್ಟ್ ವರೆಗೂ ಹೋಗಿತ್ತು.