ಮುಂದಿನ ವಾರದಿಂದ ತೀವ್ರಗೊಳ್ಳಲಿರುವ ಚಳಿ | ಹವಾಮಾನ ಇಲಾಖೆಯಿಂದ ಎಚ್ಚರಿಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(22-11-2020): ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ವಾರದಿಂದ ಚಳಿ ತೀವ್ರವಾಗಲಿದೆಯೆಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಲಾ ನಿನೋ ಕಾರಣದಿಂದಾಗಿ ಈ ವರ್ಷವು ಚಳಿಯಲ್ಲಿ ವಿಪರೀತ ಏರಿಕೆ ಕಾಣುವ ಸಾಧ್ಯತೆಯಿದೆಯೆನ್ನಲಾಗಿದೆ.

ಈ ಬಗ್ಗೆ ವಿವರಣೆ ನೀಡಿದ ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್‌. ಪಾಟೀಲ, ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಧಾರವಾಡ, ವಿಜಯಪುರ, ಗದಗ, ಹಾವೇರಿ ಮತ್ತು ದಾವಣಗೆರೆಯಲ್ಲಿ ವಾತಾವರಣದ ಉಷ್ಣತೆಯು ಹತ್ತು ಡಿಗ್ರಿ ಸೆಲ್ಸಿಯಸ್ ವರೆಗೂ ಇಳಿಕೆಯಾಗಲಿದೆಯೆಂದು ಹೇಳಿದ್ದಾರೆ.

ಒಂದು ಕಡೆಯಿಂದ ದೆಹಲಿಯಲ್ಲಿ ತಾಪಾಮಾನವು 8.5 ಡಿಗ್ರಿ ಸೆಲ್ಸಿಯಸಿಗೆ ಇಳಿಕೆಯಾಗಿದ್ದು, ಜನ ಜೀವನ ದುಸ್ತರಗೊಂಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು