ಮುಂದಿನ ವಾರ ಇಸ್ರೇಲ್ ನಲ್ಲಿ ಚುನಾವಣೆ | ಕಟ್ಟಾ ಬಲಪಂಥೀಯ ವಾದಿ ನಫ್ತಾಲಿ ಬೆನೆಟ್ ಸಂಭಾವ್ಯ ಪ್ರಧಾನಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಜೆರುಸಲೇಂ: ಇಸ್ರೇಲ್ ನ ಮಾಜಿ ಉದ್ಯಮಿ, ಕಟ್ಟಾ ಧಾರ್ಮಿಕತೆ ಹಾಗೂ ರಾಷ್ಟ್ರೀಯತೆ ಪ್ರತಿಪಾದಿಸುವ ಪಕ್ಷ ಯಾಮಿನಾ ಪಾರ್ಟಿ ನಾಯಕ ನಫ್ತಾಲಿ ಬೆನೆಟ್‌ ಅವರು ಹೊಸ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿಕ್ಕಿದ್ದಾರೆ ಎಂದು ಅಲ್ಲಿನ ರಾಜಕೀಯ ವಿಮರ್ಶಕರು ವಿಶ್ಲೇಷಿಸಿದ್ದಾರೆ. ಅಲ್ಲದೇ, ಬೆನೆಟ್‌ ಅವರೇ ಪ್ರಧಾನಿ ಆಗುವ ಸಾಧ್ಯತೆ ಇದೆ ಎಂಬವುದನ್ನೂ ವಿಮರ್ಶಿಸಿದ್ದಾರೆ.

ಮುಂದಿನ ವಾರ ಇಸ್ರೇಲ್ ನಲ್ಲಿ ಚುನಾವಣೆ ನಡೆಯಲಿಕ್ಕಿದ್ದು ಅಲ್ಲಿಮ ರಾಜಕೀಯ ಪಕ್ಷಗಳು ಚುನಾವಣಾ ಅಖಾಡಕ್ಕಿಳಿದಿದ್ದಾರೆ. ಯಾಮಿನಾ ಪಕ್ಷವೂ ಬಿರುಸಿನ ತಯಾರಿಯಲ್ಲಿದೆ. ಈ ಬಾರಿಯ ಸಂಭಾವ್ಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬೆನೆಟ್ ಅವರು ಕಣಕ್ಕಿಳಿಯಲಿದ್ದಾರೆ.
ತಮ್ಮ ರಾಜಕೀಯ ಜೀವನದುದ್ದಕ್ಕೂ ಬಲಪಂಥೀಯ ವಿಚಾರಧಾರೆಯ ಮತದಾರರನ್ನೇ ಓಲೈಸುತ್ತಾ ಬಂದಿರುವ ಅವರು, ವೆಸ್ಟ್‌ ಬ್ಯಾಂಕ್‌ ಆಕ್ರಮಿತ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಇಸ್ರೇಲ್‌ನ ನಿಲುವನ್ನು ಬೆಂಬಲಿಸಿದ ವ್ಯಕ್ತಿಯೂ ಆಗಿದ್ದಾರೆ.ರಕ್ಷಣಾ ಸಚಿವರಾಗಿಯೂ ಕಾರ್ಯ ನಿರ್ವಹಿಸಿರುವ ಬೆನೆಟ್‌, ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಉತ್ತಮ ಆಡಳಿತ ನೀಡುವ ಭರವಸೆ ನೀಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು