ಮುಂಬೈ(22/10/2020): ತನ್ನ ಮೇಲೆ ಸಹೋದ್ಯೋಗಿ ವೈದ್ಯರೊಬ್ಬರು ಬ್ಲಾಕ್ ಮೇಲ್ ಮಾಡಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿಯೊಬ್ಬಳು ಆರೋಪಿಸಿದ್ದಾಳೆ.
ಸೆಂಟ್ರಲ್ ಮುಂಬೈನ ಆಸ್ಪತ್ರೆಯೊಂದರ 31 ವರ್ಷದ ಈ ವೈದ್ಯನ ವಿರುದ್ಧ ಬೈಕುಲ ಠಾಣೆಯ ಪೊಲೀಸರು ಹಲ್ಲೆ, ಅತ್ಯಾಚಾರ ಹಾಗೂ ಇತರ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ.
26 ವರ್ಷದ ಸಂತ್ರಸ್ತ ಯುವತಿ, ‘ವೈದ್ಯನು ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿ, ತನಗೆ ಸಂಬಂಧಿಸಿದ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ, ಸುಮಾರು ಒಂದು ವರ್ಷದಿಂದ ಅತ್ಯಾಚಾರವೆಸಗಿದ್ದಾನೆ‘ ಎಂದು ದೂರು ನೀಡಿದ್ದರು.