ಮುಂಬೈ(28-12-2020): ಮುಂಬೈನ ಸ್ಯಾಂಟಾಕ್ರೂಜ್ ಪ್ರದೇಶದಲ್ಲಿ ಮೊಬೈಲ್ ಫೋನ್ ಕದ್ದ ಆರೋಪದ ಮೇಲೆ 30 ವರ್ಷದ ವ್ಯಕ್ತಿಯನ್ನು ಥಳಿಸಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಡಿಸೆಂಬರ್ 25 ರಂದು ನಡೆದಿದ್ದು, ಮೃತ ಯುವಕನನ್ನು ಶೆಹಜಾದ್ ಖಾನ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
ಖಾನ್ ಶುಕ್ರವಾರ ಮುಂಜಾನೆ ಕಾಲೋನಿ ಪ್ರವೇಶಿಸಿದ್ದಾನೆ. ಆತನನ್ನು ಫೋನ್ ಕಳ್ಳತನ ಮಾಡಿದ್ದಾನೆಂದು ಆರು ಜನರ ತಂಡ ಗಂಭೀರವಾಗಿ ಥಳಿಸಿದೆ. ಆತ ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ತೆರಳಿದ್ದು, ಈ ವೇಳೆಗೆ ಮೃತಪಟ್ಟಿದ್ದಾನೆಂದು ಸಾಂತಾ ಕ್ರೂಜ್ ಪೊಲೀಸ್ ಠಾಣೆಯ ಅಧಿಕಾರಿಯೋರ್ವರು ತಿಳಿಸಿದ್ದಾರೆ
ಶೆಹಜಾದ್ ಖಾನ್ ಅವರ ಸಹೋದರನ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಐಪಿಸಿಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡರು ಮತ್ತು ಎಲ್ಲಾ ಆರು ಆರೋಪಿಗಳನ್ನು ಬಂಧಿಸಿದ್ದಾರೆ.