ಶಾಕಿಂಗ್ ನ್ಯೂಸ್: ಯುವಕನ ಮೇಲೆಯೇ ಗ್ಯಾಂಗ್ ರೇಪ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬೈ(10-01-2021): ಮುಂಬೈನ ಥಾಣೆಯಲ್ಲಿ 19 ವರ್ಷದ ಮಾಡೆಲ್​ ಯುವಕನ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಬಗ್ಗೆ ವರದಿಯಾಗಿದೆ.

ಗುಜರಾತ್​ನಲ್ಲಿ ಮಾಡೆಲ್​ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಯುವಕ, ಚಿತ್ರರಂಗದಲ್ಲಿ ಅವಕಾಶ ಹುಡುಕುತ್ತಾ ಮುಂಬೈಗೆ ಬಂದಿದ್ದ. ಆತನಿಗೆ ಫೇಸ್​ಬುಕ್​ನಲ್ಲಿ ಪುನೀತ್​ ಶುಕ್ಲಾ ಎಂಬಾತನ ಪರಿಚಯವಾಗಿತ್ತು. ಈತ ಯುವಕನಿಗೆ ಉದ್ಯೋಗವನ್ನು ಕೊಡಿಸುವ ಭರವಸೆಯನ್ನು ನೀಡಿ ತನ್ನ ಬಳಿ ಕರೆಸಿಕೊಂಡಿದ್ದಾನೆ. ಬಳಿಕ ಸ್ನೇಹಿತರ ಜೊತೆ ಸೇರಿ ಸಾಮೂಹಿಕವಾಗಿ ಅತ್ಯಾಚಾರವನ್ನು ನಡೆಸಿದ್ದಾನೆ. ಈ ವೇಳೆ ಯುವಕ ವಿರೋಧಿಸಿದಾಗ ಆತನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ.

ಈ ಇಡೀ ಘಟನೆಯನ್ನು ಆರೋಪಿ ಶುಕ್ಲಾ ವಿಡಿಯೋ ಮಾಡಿದ್ದು, ದೂರು ನೀಡಿದರೆ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾನೆ.

ಈ ಕುರಿತು ಸಂತ್ರಸ್ತ ಯುವಕ ಕೇಸ್ ದಾಖಲಿಸಿದ್ದು, ಮುಖ್ಯ ಆರೋಪಿ ಪುನೀತ್ ಶುಕ್ಲಾ, ರವಿ ಜೈಸ್ವಾಲ್, ಅರವಿಂದ್ ಪ್ರಜಾಪತಿಯನ್ನು ಬಂಧಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು