ಹೈದರಾಬಾದ್(24-12-2020): ಗುರ್ಗಾಂವ್ನಲ್ಲಿ ಬಹು ಕೋಟಿ ಸಾಲ ಅಪ್ಲಿಕೇಶನ್ಗಳ ಹಗರಣ ಬಹಿರಂಗವಾಗಿದೆ. ಬಹು ಕೋಟಿ ಹಣ ಸಾಲ ಹಗರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಪೊಲೀಸರು 423 ಕೋಟಿ ಹೊಂದಿರುವ 75 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ್ದಾರೆ.
ರಿಸರ್ವ್ ಬ್ಯಾಂಕ್ ಅನುಮೋದನೆ ಪಡೆಯದ 30 ಮೊಬೈಲ್ ಫೋನ್ ಆ್ಯಪ್ಗಳ ಮೂಲಕ ಹಣ ಸಾಲ ವ್ಯವಹಾರವನ್ನು ನಡೆಸಲಾಗಿದ್ದು, ಬಲಿಪಶುಗಳಿಗೆ ಶೇಕಡಾ 35 ರಷ್ಟು ಬಡ್ಡಿ ವಿಧಿಸಲಾಗಿದೆ.
ಹಣ ಸಾಲ ನೀಡುವವರ ಕಿರುಕುಳ ಮತ್ತು ಅವಮಾನಕ್ಕೊಳಗಾಗಿ ಮೂವರು ಆತ್ಮಹತ್ಯೆ ಮಾಡಿಕೊಂಡ ನಂತರ ತೆಲಂಗಾಣದ ಪೊಲೀಸರು ಎಚ್ಚರಗೊಂಡಿದ್ದರು. ಅಧಿಕಾರಿಗಳು ಹೈದರಾಬಾದ್ ಮತ್ತು ಹರಿಯಾಣದ ಗುರಗಾಂವ್ನಲ್ಲಿ ಅನೇಕ ಕಡೆ ದಾಳಿ ನಡೆಸಿದ್ದು, 16 ಜನರನ್ನು ಬಂಧಿಸಿದ್ದಾರೆ.
ಸೈಬರಾಬಾದ್ ಪೊಲೀಸರು ಈ ಕುರಿತು ಸ್ವತಂತ್ರ ತನಿಖೆ ನಡೆಸುತ್ತಿದ್ದು, ಅಮೆರಿಕದಿಂದ ಪದವಿ ಪಡೆದ ಎಂಜಿನಿಯರ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.
32 ವರ್ಷದ ಶರತ್ ಚಂದ್ರ ಎಂಬಾತ ಲೋನ್ ಅಪ್ಲಿಕೇಶನ್ಗಳನ್ನು ಬೆಂಗಳೂರಿನ ಕಂಪನಿಗಳ ಮೂಲಕ ಅಭಿವೃದ್ಧಿಪಡಿಸಿದ್ದರು. ಜನವರಿ ಮತ್ತು ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನೋಂದಾಯಿತ ಸಂಸ್ಥೆಗಳ ಮೂಲಕ ಮತ್ತು ಗುರಗಾಂವ್ ಮತ್ತು ಹೈದರಾಬಾದ್ನಲ್ಲಿನ ಕಾಲ್ ಸೆಂಟರ್ಗಳ ಮೂಲಕ ಈ ವ್ಯವಹಾರವು ನಡೆಯುತ್ತಿತ್ತು.
ಕಾಲ್ ಸೆಂಟರ್ಗಳು ಗ್ರಾಹಕರನ್ನು ಆಮಿಷವೊಡ್ಡಲು ತರಬೇತಿ ಪಡೆದ ನೂರಾರು ಯುವಕರನ್ನು ನೇಮಿಸಿಕೊಂಡಿವೆ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.