ದ್ರಾವಿಡ ನಾಡಲ್ಲಿ ಡಿಎಂಕೆ ಸಾರಥ್ಯ: ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎಮ್‌.ಕೆ.ಸ್ಟಾಲಿನ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೆನ್ನೈ: ತಮಿಳುನಾಡಲ್ಲಿ ದಶಕದ ಬಳಿಕ ಡಿಎಂಕೆ ಪಕ್ಷ ಮತ್ತೆ ಗದ್ದುಗೆ ಏರಿದೆ. ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಗೆಲುವು ದಾಖಲಿಸಿದ ಡಿಎಂಕೆ ಪಕ್ಷ ದ್ರಾವಿಡ ನಾಡಲ್ಲಿ ಇಂದಿನಿಂದ ಅಧಿಕಾರ ಚಲಾಯಿಸಲಿದೆ.

ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ ಎಂ.ಕೆ.ಸ್ಟಾಲಿನ್ ರಾಜ್ಯದ ನೂತನ ಸಿಎಂ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಚೆನ್ನೈನಲ್ಲಿರುವ ರಾಜಭವನದಲ್ಲಿ ಇಂದು ಮುಂಜಾನೆ 9ಗಂಟೆಗೆ ನಡೆದ ಸರಳ ಪದಗ್ರಹಣ ಸಮಾರಂಭದಲ್ಲಿ 68 ವರ್ಷದ ಎಂ.ಕೆ ಸ್ಟಾಲಿನ್ ಅವರಿಗೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ಎಮ್.ಕೆ. ಸ್ಟಾಲಿನ್ ಜೊತೆಗೆ ತಮ್ಮ ಸಂಪುಟದಲ್ಲಿ 19 ಮಾಜಿ ಮಂತ್ರಿಗಳು ಮತ್ತು 15 ಜನ ಹೊಸಬರಿಗೆ ಅವಕಾಶ ನೀಡಿದ್ದಾರೆ.

234 ವಿಧಾನಸಭಾ ಸದಸ್ಯರ ಬಲ ಹೊಂದಿರುವ ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ 159 ಸ್ಥಾನಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸಿತ್ತು. ಕರುಣಾನಿಧಿ ಮರಣದ ನಂತರ ಪಕ್ಷವನ್ನು ಮುನ್ನಡೆಸುಕೊಂಡು ಬಂದಿರುವ ಸ್ಟಾಲಿನ್ ದಶಕದ ನಂತರ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು