ಮುಖ್ಯಮಂತ್ರಿ ಪದಚ್ಯುತಿಯ ಪ್ರಯತ್ನದಲ್ಲಿ ಬಿ.ಎಲ್‌.ಸಂತೋಷ ಕೂಡ ಷಾಮೀಲಾಗಿದ್ದಾರೆ : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪದಚ್ಯುತಿಯ ಪ್ರಯತ್ನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕೆ.ಎಸ್.ಈಶ್ವರಪ್ಪನವರ ಜೊತೆಯಲ್ಲಿ ಬಿ.ಎಲ್ ಸಂತೋಷ್ ಕೂಡಾ ಷಾಮೀಲಾಗಿದ್ದಾರೆ. ಈ ಕಾರಣದಿಂದಾಗಿಯೇ ಬಿಜೆಪಿ ಹೈಕಮಾಂಡ್ ಮೂಕಪ್ರೇಕ್ಷಕನಾಗಿ ಕೂತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.

“ಮುಖ್ಯಮಂತ್ರಿಗಳ ವಿರುದ್ದ ದಿನನಿತ್ಯ ಹೇಳಿಕೆ ನೀಡಿ ಬಹಿರಂಗ ಸಮರ ಸಾರಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಈಶ್ವರಪ್ಪ ವಿರುದ್ದ ಕ್ರಮಕೈಗೊಳ್ಳಲಾಗದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಅಸಮರ್ಥ ನಾಯಕ.
ಇಂತಹವರಿಗೆ ವಿರೋಧ ಪಕ್ಷದ ನಾಯಕರ ಬಗ್ಗೆ‌ ಮಾತನಾಡುವ ಯಾವ ಯೋಗ್ಯತೆ ಇದೆ?” ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ತಿರುಗೇಟು ನೀಡಿದ್ದಾರೆ.

“ನಮ್ಮ ಸರ್ಕಾರ ₹ . 50,000ವರೆಗೆ ರೈತರ ಸಾಲ ಮನ್ನಾ ಮಾಡಿದರೆ, ಮನಮೋಹನ್ ಸಿಂಗ್ ಅವರ ಸರ್ಕಾರ ₹ 72,000 ಕೋಟಿ ಸಾಲ ಮನ್ನಾ ಮಾಡಿತು. ಆದರೆ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳು ಒಂದೇ ಒಂದು ರೂ. ಸಾಲ ಮನ್ನಾ ಮಾಡಲಿಲ್ಲ. ಬಿಜೆಪಿ ಸರ್ಕಾರಗಳು ಅಧಿಕಾರಕ್ಕೆ ಬರುವುದು ಲೂಟಿ ಹೊಡೆಯಲೇ ಹೊರತು ಜನಪರ ಕೆಲಸ ಮಾಡಲು ಅಲ್ಲ” ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರವನ್ನು ವಾಗ್ದಾಳಿ ನಡೆಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು