ಮೂಗಿನಲ್ಲಿ ಲಿಂಬೆಹಣ್ಣಿನ ರಸ ಬಿಟ್ಟುಕೊಂಡು ಮೃತಪಟ್ಟ ಶಿಕ್ಷಕ

Share on facebook
Share on twitter
Share on linkedin
Share on whatsapp
Share on telegram
Share on email
Share on print

ರಾಯಚೂರು: ಲಿಂಬೆಹಣ್ಣಿನ ರಸ ಮೂಗಿನಲ್ಲಿ ಹಾಕಿಕೊಳ್ಳುವುದರಿಂದ ಕೊರೋನಾ ಸೋಂಕಿನಿಂದ
ದೂರ ಇರಬಹುದು. ನಾಲ್ಕು ಹನಿ ಮೂಗಿನಲ್ಲಿ ಹಾಕಿಕೊಂಡರೇ ಉಸಿರಾಟದ ಸಮಸ್ಯೆ ಇರುವುದಿಲ್ಲ, ಬದಲಿಗೆ ಆಮ್ಲಜನಕ ವೃದ್ಧಿಯಾಗುತ್ತದೆ ಎನ್ನುವ ಸುದ್ದಿ ರಾಜ್ಯದಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಇಂಥ ಮಧ್ಯೆ ರಾಯಚೂರು ಜಿಲ್ಲೆಯ ಸಿಂಧನೂರು ನಗರದ ನಿವಾಸಿ ಬಸವರಾಜ (43) ಎನ್ನುವ ಶಿಕ್ಷಕರು ಬುಧವಾರ ಬೆಳಿಗ್ಗೆ ನಿಂಬೆರಸ ಮೂಗಿಗೆ ಬಿಟ್ಟುಕೊಂಡಿದ್ದರಿಂದ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

ನಿಂಬೆರಸ ಬಿಟ್ಟುಕೊಂಡಿದ್ದರಿಂದ ಎರಡು ಬಾರಿ ವಾಂತಿಯಾಗಿದೆ. ಆನಂತರ ನೆಲಕ್ಕೆ ಕುಸಿದಿದ್ದರಿಂದ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಅವರಿಗೆ ಯಾವುದೇ ಅನಾರೋಗ್ಯ ಇರಲಿಲ್ಲ ಎನ್ನುವುದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಸಿಂಧನೂರಿನ ಶರಣಬಸವೇಶ್ಚರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ನೇಮಕವಾಗಿದ್ದರು. ಲಿಂಬೆರಸ ಮೂಗಿನಲ್ಲಿ ಬಿಟ್ಟುಕೊಂಡು ಅಕಾಲಿಕವಾಗಿ ಮೃತಪಟ್ಟಿದ್ದಾರೆ, ನಿಂಬೆರಸ ಎಷ್ಟು ಉತ್ತಮವೋ ಅಷ್ಟೇ ಅಪಾಯಕಾರಿ ಕೂಡ ಹೌದು, ಯಾರೋ ಹೇಳಿಕೆ ನೀಡಿದ್ದಾರೆ ಎಂದು ಪ್ರಯೋಗ ಮಾಡಲು ಯತ್ನಿಸುತ್ತಿದರೆ ಇಂಥ ದುರ್ಘಟನೆ ಸಂಭವಿಸುವ ಸಾಧ್ಯತೆ ಇರುತ್ತದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು