ಮಂಗಳೂರು(29-11-2020): ಬದ್ರಿಯಾ ಜುಮ್ಮಾ ಮಸ್ಜಿದ್ 7ನೇ ಬ್ಲಾಕ್ ಕೃಷ್ಣಾಪುರ ಇದರ ವತಿಯಿಂದ ಡಾಕ್ಟರೇಟ್ ಗೌರವ ಪುರಸ್ಕೃತ ಮಾಜಿ ಶಾಸಕ ಡಾ.ಮೊಹಿಯುದ್ದಿನ್ ಬಾವರವರವರನ್ನು ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷ್ಣಾಪುರ ಸಂಯುಕ್ತ ಖಾಝಿ ಬಹು ಅಲ್ ಹಾಜ್ ಇಬ್ರಾಹಿಂ ಮುಸ್ಲಿಯಾರ್, ಅಧ್ಯಕ್ಷರಾದ ಹಾಜಿ ಅಬ್ದುಲ್ ಜಲೀಲ್ (ಬದ್ರಿಯಾ), ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಹಾಗೂ ಧಾರ್ಮಿಕ ಉಲಮಾಗಳು, ರಾಜಕೀಯ ಮುಖಂಡರು, ಉದ್ಯಮಿಗಳು, ಜಮಾತಿನ ಸದಸ್ಯರುಗಳು ಡಾ. ಬಾವರವರನ್ನು ಸನ್ಮಾನಿಸಿದರು.