ಕಲ್ಕತ್ತಾ :ಪಶ್ಚಿಮ ಬಂಗಳಾದಲ್ಲಿ ವಿವಿಧ ಪಕ್ಷಗಳು ಚುನಾವಣೆಯ ಪೂರ್ವಭಾವಿ ಬಿರುಸಿನ ತಯಾರಿಯಲ್ಲಿದೆ.ಹಲವು ವಾಗ್ವಾದಗಳು,ಪರ-ವಿರೋಧ ಚರ್ಚೆಗಳು,ಪ್ರಚಾರಕ್ರಿಯೆಗಳು ನಾಯಕರ ನಡುವೆ ಆಗುತ್ತಲೇ ಇದೆ.ಅದರಲ್ಲೂ ವಿಶೇಷವಾಗಿ ಪ್ರಚಾರ ಕಣದಲ್ಲಿರುವ ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ ನಡುವಣ ವಾಗ್ದಾಳಿ ತಾರಕಕ್ಕೇರಿದೆ.
“ನಾನು 7 ಬಾರಿ ಲೋಕಸಭಾ ಸದಸ್ಯೆಯಾಗಿದ್ದೆ,ಹಲವು ಪ್ರಧಾನಿಗಳನ್ನು ಕಂಡಿದ್ದೇನೆ.ಆದರೆ ನರೇಂದ್ರ ಮೋದಿಯಷ್ಟು ಕ್ರೂರ ಮನಸ್ಥಿತಿಯ ಪ್ರಧಾನಿಯನ್ನು ನಾನು ಕಂಡಿಲ್ಲ.ಎಷ್ಟು ಕ್ರೂರಿಯೋ ಅಷ್ಟೇ ನಿರ್ದಯಿ ಕೂಡ.ಎಂದು ಮಮತಾಗೆ ಬ್ಯಾನರ್ಜಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಮುಂದೆ ಮಾತನಾಡಿದ ಅವರು “ಬಿಜೆಪಿ ಪಕ್ಷವು ರಾಕ್ಷಸರ ಪಕ್ಷ .ರಾವಣ,ದುರ್ಯೋಧನ,ದುಶ್ಯಾಸನರಿಂದಲೇ ಪಕ್ಷ ತುಂಬಿದೆ.ಅಶಾಂತಿ ಹಾಗೂ ಭಯ ಹುಟ್ಟಿಸುವುದೇ ಬಿಜೆಪಿ ಪಕ್ಷದ ಉದ್ದೇಶ” ಎಂದು ವಾಗ್ದಾಳಿ ನಡೆಸಿದರು.