ಮೋದಿಯ ಬಾಂಗ್ಲಾ ಭೇಟಿ ವಿರೋಧಿಸಿ ವ್ಯಾಪಕ ಪ್ರತಿಭಟನೆ | ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಢಾಕಾ: ನರೇಂದ್ರ ಮೋದಿಯ ಬಾಂಗ್ಲಾ ಭೇಟಿಗೆ ಬಾಂಗ್ಲಾದೇಶಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಪ್ರಬಲ ಪ್ರತಿಭಟನೆ ಕಂಡು ಬಂದಿದೆ.

ಪ್ರತಿಭಟನಕಾರರಿಗೆದುರಾಗಿ ನಡೆಸಿದ ಪೋಲೀಸ್ ರಬ್ಬರ್ ಗುಂಡಿಗೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೇರಿದೆ. ಪ್ರತಿಭಟನೆಯ ಕೇಂದ್ರ ಬಿಂದುವಾದ ಚಿತ್ತಗಾಂಗಿನಲ್ಲಿ ಪ್ರತಿಭಟನಕಾರರು ಮತ್ತು ಪೋಲೀಸರ ನಡುವೆ ಸಂಘರ್ಷ ನಡೆಯುತ್ತಿದೆ.

ರಾಜಧಾನಿ ಢಾಕಾದಲ್ಲೂ ಪ್ರತಿಭಟನೆಯ ದೃಶ್ಯಗಳು ಕಂಡು ಬರುತ್ತಿದೆ. ಢಾಕಾದ ಬೈತುಲ್ ಮುಕರ್ರಮ್ ಮಸೀದಿಯ ಸಮೀಪ ಸಾಕಷ್ಟು ಸಂಖ್ಯೆಯ ಪ್ರತಿಭಟನಕಾರರು ಜಮಾಯಿಸಿದ್ದರುಪ್ರತಿಭಟನಕಾರರು ಸಾಂಕೇತಿಕವಾಗಿ ಶೂಗಳನ್ನು ಎತ್ತಿತೋರಿಸಿದರು. ಢಾಕಾದಲ್ಲಿ ನಡೆದ ಪ್ರತಿಭಟನೆಯ ವೇಳೆಯಲ್ಲಿ ಪೋಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಪತ್ರಕರ್ತರಿಗೂ ಸೇರಿದಂತೆ ಹಲವು ಮಂದಿಗೆ ಗಾಯಗಳಾಗಿವೆ.

ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದಾಗ, ಪ್ರತಿಭಟನಕಾರರನ್ನು ಚದುರಿಸಲು ಟಿಯರ್ ಗ್ಯಾಸ್, ರಬ್ಬರ್ ಬುಲೆಟುಗಳನ್ನೂ ಪ್ರಯೋಗಿಸಲಾಯಿತು ಎಂದು ಸ್ಥಳೀಯ ಪೋಲೀಸರು ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು