ಪ್ರಧಾನಿ ಕಣ್ಣೀರಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕು: ನಿರ್ದೇಶಕ ರಾಮ ಗೋಪಾಲ ವರ್ಮಾ ವ್ಯಂಗ್ಯ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ : ಕೋವಿಡ್‌ನಿಂದ ಮೃತಪಟ್ಟವರ ಕುರಿತು ಮಾತನಾಡುವ ಸಂದರ್ಭದಲ್ಲಿ ಭಾವುಕರಾದ ಪ್ರಧಾನಿ ಮೋದಿಯವರಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕೆಂದು
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ವ್ಯಂಗ್ಯವಾಡಿದ್ದಾರೆ.

ಇತ್ತಿಚೆಗಷ್ಟೇ ವಾರಾಣಸಿಯಲ್ಲಿನ ವೈದ್ಯರು ಮತ್ತು ಮುಂಚೂಣಿ ಕಾರ್ಯಕರ್ತರ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಕೋವಿಡ್‌ನಿಂದ ಮೃತಪಟ್ಟವರ ಕುರಿತು ಮಾತನಾಡುವ ಸಂದರ್ಭದಲ್ಲಿ ಭಾವುಕರಾಗಿ
ಕಣ್ಣೀರಿಟ್ಟಿದ್ದರು.

ಕೋವಿಡ್ ಸಾಂಕ್ರಾಮಿಕ ಸ್ಥಿತಿಯನ್ನು ನಿಭಾಯಿಸಲು ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು ವಿಪಕ್ಷಗಳಿಂದ ತೀವ್ರ ಟೀಕೆಗೆ ಒಳಗಾಗುತ್ತಿರುವ ಪ್ರಧಾನಿ ಮೋದಿಗೆ ಇದು ಮೊಸಳೆ ಕಣ್ಣೀರು ಎಂದು ಕಾಂಗ್ರೆಸ್ ವ್ಯಂಗ್ಯವಾಡಿವೆ. ಇದೀಗ ಬಾಲಿವುಡ್ ಸಿನಿಮಾ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಅಣುಕಿಸಿದ್ದಾರೆ. ಮೋದಿಯವರಿಗೆ ಆಸ್ಕರ್ ಪ್ರಶಸ್ತಿ ಕೊಡಬೇಕೆಂದು ವಿಡಿಯೋ ಎಡಿಟ್ ಮೂಲಕ ಕಾಲೆಳೆದಿದ್ದಾರೆ.

 

ಆಸ್ಕರ್ ಪ್ರಶಸ್ತಿ ನೀಡುತ್ತಿರುವ ಕಾರ್ಯಕ್ರಮದ ಜೊತೆ ಮೋದಿ ಭಾವುಕರಾದ ದೃಶ್ಯಗಳನ್ನು ಜೋಡಿಸಿ ಎಡಿಟ್ ಮಾಡಲಾದ ವಿಡಿಯೋ ಕ್ಲಿಪ್ ವೊಂದನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ರಾಮ ಗೋಪಾಲ ವರ್ಮಾ ‘THE BEST OSCAR EVER’ ಎಂದು ಬರೆದುಕೊಂಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು