ಮೋದಿ ಸುಳ್ಳು ಹೇಳಿ ನಮ್ಮ ಸೈನಿಕರನ್ನು‌ ಅವಮಾನಿಸುತ್ತಿದ್ದಾರೆ: ರಾಹುಲ್ ಗಾಂಧಿ ಟೀಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ಪಾಟ್ನಾ(23/10/2020): ಚೀನಾದ ಸೈನಿಕರು ಭಾರತದೊಳಗೆ ನುಸುಳಿ ಬಂದಿದ್ದರೂ, ಪ್ರಧಾನಿ ಮೋದಿಯವರು ಸುಳ್ಳು ಹೇಳಿ ನಮ್ಮ ಸೈನಿಕರನ್ನು ಅವಮಾನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ಬಿಹಾರದ ನವಾಡಾ ಜಿಲ್ಲೆಯ ಹಿಸುವಾದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿ ಮಾತನಾಡಿದ ರಾಹುಲ್‌ ಗಾಂಧಿ,‘ ಚೀನಾದ ಸೈನಿಕರು ನಮ್ಮ ಗಡಿಯೊಳಗೆ ನುಸುಳಿ ಬಂದಿರುವುದು ಸಾಬೀತಾಗಿದೆ. ಆದರೂ, ಯಾರೊಬ್ಬರೂ ನಮ್ಮ ಗಡಿಯೊಳಗೆ ಬಂದಿಲ್ಲ ಎಂದು ಸುಳ್ಳು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸೈನಿಕರಿಗೆ ಅವಮಾನ ಮಾಡಿದ್ದಾರೆ. ಚೀನಾದ ಸೈನ್ಯವು ಭಾರತದ ಭೂಪ್ರದೇಶಕ್ಕೆ ನುಸುಳಿದೆ. ಭಾರತದ 1,200 ಕಿ.ಮೀ ಭೂ ಪ್ರದೇಶವನ್ನು ಅವರು ಅತಿಕ್ರಮಿಸಿದ್ದಾರೆ. ಚೀನಾದ ಸೈನಿಕರನ್ನು ಯಾವಾಗ ಭಾರತದಿಂದ ಹೊರ ಹಾಕುತ್ತೀರಿ’ ಎಂದು ಪ್ರಶ್ನಿಸಿದ್ದಾರೆ.

‘ಲಾಕ್‌ಡೌನ್‌ನಿಂದ ಜನಸಾಮಾನ್ಯರು ಬಹಳ ಮುಖ್ಯವಾಗಿ ವಲಸೆ ಕಾರ್ಮಿಕರು ಹಲವಾರು ವಿಧದ ಸಮಸ್ಯೆಯನ್ನು ಎದುರಿಸಿದ್ದಾರೆ. ಅಕ್ಕಪಕ್ಕದ ರಾಜ್ಯಗಳು ಬಿಹಾರದ ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯದಿಂದ ಓಡಿಸುತ್ತಿದ್ದಾಗ ಮೋದಿ ಪ್ರಧಾನಿಯಾಗಿ ಅವರಿಗೆ ಏನು ಸಹಾಯ ಮಾಡಿದ್ದಾರೆ? ಅದನ್ನು ಅವರು ಬಹಿರಂಗಪಡಿಸಲಿ ಎಂದು ಇದೇ ವೇಳೆ ಪ್ರಧಾನಿಯವರನ್ನು ರಾಹುಲ್‌ ಗಾಂಧಿ ತರಾಟೆಗೆ ತೆಗೆದುಕೊಂಡರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು