ಮೋದಿ ಆಸ್ತಿಯಲ್ಲಿ ಹೆಚ್ಚಳ| ಪ್ರಧಾನಿ ಮೋದಿ ಬಳಿ ಎಷ್ಟು ಆಸ್ತಿ ಇದೆ ಗೊತ್ತಾ?

modhi
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ(15-10-2020): ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಸ್ತಿಯ ನಿವ್ವಳ ಮೌಲ್ಯ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಾಗಿದೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಬಹಿರಂಗಪಡಿಸಿದೆ

ಪ್ರಧಾನ ಮಂತ್ರಿಯ ಇತ್ತೀಚಿನ ಆಸ್ತಿ ಘೋಷಣೆಯ ಪ್ರಕಾರ, ಅವರ ನಿವ್ವಳ ಆಸ್ತಿ ಮೌಲ್ಯವು 2.85 ಕೋಟಿ ರೂ. ಆಗಿದ್ದರೆ, ಅದು ಕಳೆದ ವರ್ಷ 2.49 ಕೋಟಿ ರೂ.ಆಗಿತ್ತು.

ಸುಮಾರು 3.3 ಲಕ್ಷ ರೂ.ಗಳ ಬ್ಯಾಂಕ್ ಠೇವಣಿ ಮತ್ತು 2019 ರಲ್ಲಿ 33 ಲಕ್ಷ ರೂ.ಗಳ ಸುರಕ್ಷಿತ ಹೂಡಿಕೆಯ ಆದಾಯದಿಂದಾಗಿ ಮೋದಿಯ ಆಸ್ತಿ ಹೆಚ್ಚಾಗಿದೆ.

ಪಿಎಂ ಮೋದಿ ಅವರು 8,43,124 ಮೌಲ್ಯದ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು (ಎನ್‌ಎಸ್‌ಸಿ), 1,50,957 ರೂ.ಗಳ ಜೀವ ವಿಮಾ ಪಾಲಿಸಿಗಳು ಮತ್ತು 20,000 ರೂ ಮೌಲ್ಯದ ತೆರಿಗೆ ಉಳಿತಾಯ ಇನ್ಫ್ರಾ ಬಾಂಡ್‌ಗಳನ್ನು ಸಹ ಹೊಂದಿದ್ದಾರೆ. ಪ್ರಧಾನಿ ಹೊಂದಿರುವ ಮೂವೇಬಲ್ ಆಸ್ತಿ ಮೌಲ್ಯ ಸುಮಾರು 1.75 ಕೋಟಿ ರೂ. ಇದೆ.

ಮೋದಿ ಹೆಸರಿನಲ್ಲಿ ಯಾವುದೇ ಸಾಲವಿಲ್ಲ ಮತ್ತು ವೈಯಕ್ತಿಕ ವಾಹನವಿಲ್ಲ ಎಂದು ಆಸ್ತಿ ಘೋಷಣೆ ಮಾಡಿದ್ದಾರೆ, ಅವರು ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ. ಅಂದಾಜು 45 ಗ್ರಾಂ ತೂಕವಿದ್ದು, ಇದರ ಮೌಲ್ಯ 1.5 ಲಕ್ಷ ರೂ.ಆಗಿದೆ.ಇನ್ನು ಗಾಂಧಿನಗರದ ಸೆಕ್ಟರ್ -1 ರಲ್ಲಿ 3,531 ಚದರ ಅಡಿ ಅಳತೆಯ ಜಮೀನನ್ನು ಹೊಂದಿದ್ದಾರೆ ಎಂದು ಬಹಿರಂಗವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು