ನವದೆಹಲಿ(18-02-2021): ಪೆಟ್ರೋಲ್, ಡಿಸೇಲ್, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಕಂಗೆಟ್ಟಿದ್ದ ಜನರಿಗೆ ಟೆಲಿಕಾಂ ಕಂಪನಿಗಳು ಕೂಡ ಶಾಕ್ ನೀಡಲು ಮುಂದಾಗಿದೆ. ಏ.1 ರಿಂದ ಮೊಬೈಲ್ ಕರೆ ಮತ್ತು ಇಂಟರ್ನೆಟ್ ದರ ಹೆಚ್ಚಾಗುವ ಸಾಧ್ಯತೆ ಇದೆ.
ಹೂಡಿಕೆ ಮಾಹಿತಿ ಮತ್ತು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಪ್ರಕಾರ, ಏಪ್ರಿಲ್ 1 ರಿಂದ ಟೆಲಿಕಾಂ ಕಂಪನಿಗಳು ದರ ಹೆಚ್ಚಳವನ್ನು ಮಾಡಲಿದೆ. 2021ರ ಏಪ್ರಿಲ್ 1 ರಿಂದ ಇಂಟರ್ನೆಟ್ ದುಬಾರಿಯಾಗಲಿದೆ.ಫೋನ್ ಕರೆ ಮತ್ತು ಇಂಟರ್ ನೆಟ್ ನಲ್ಲಿ ಎಷ್ಟು ದರ ಹೆಚ್ಚಳವಾಗಲಿದೆ ಎಂಬ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಟೆಲಿಕಾಂ ಕಂಪೆನಿಗಳು ದರ ಹೆಚ್ಚಳವನ್ನು ಮಾಡಲಿದೆ.
4 ಜಿ ಬಳಕೆದಾರರ ಶುಲ್ಕ ಕೂಡ ಹೆಚ್ಚಾಗಲಿದೆ. ಈ ಮೂಲಕ ಮುಂದಿನ ಹಣಕಾಸು ವರ್ಷದಲ್ಲಿ ಆದಾಯವನ್ನು ಹೆಚ್ಚಿಸಲು ಟೆಲಿಕಾಂ ಕಂಪೆನಿಗಳು ಮುಂದಾಗಿದೆ.