ಬಿಜೆಪಿ ಮುಖಂಡನ ಮನೆಯ ಮೇಲೆ 40ಕ್ಕೂ ಅಧಿಕ ಶಸ್ತ್ರಾಸ್ತ್ರ ಹೊಂದಿದ ವ್ಯಕ್ತಿಗಳಿಂದ ದಾಳಿ!

Gopikrishna Nema
Share on facebook
Share on twitter
Share on linkedin
Share on whatsapp
Share on telegram
Share on email
Share on print

ಇಂದೋರ್(17-11-2020): ಮಧ್ಯಪ್ರದೇಶದ ಬಿಜೆಪಿ ಹಿರಿಯ ಮುಖಂಡ ಗೋಪಿಕೃಷ್ಣ ನೇಮಾ ಅವರ ಮನೆಯ ಮೇಲೆ ಶಸ್ತ್ರಾಸ್ತ್ರವನ್ನು ಹೊಂದಿದ್ದ 40ಕ್ಕೂ ಅಧಿಕ ಮಂದಿಯ ಗುಂಪು ದಾಳಿ ನಡೆಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಜೆಪಿ ನಾಯಕ ಮತ್ತು ಅವರ ಕುಟುಂಬದ ಸದಸ್ಯರು ಸುರಕ್ಷಿತವಾಗಿದ್ದಾರೆ, ಆದರೆ ದಾಳಿ ವೇಳೆ ಅಪರಿಚಿತ ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಆರೋಪಿಗಳನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ಶೋಧ ನಡೆಯುತ್ತಿದೆ ಎಂದು ಡಿಐಜಿ ತಿಳಿಸಿದ್ದಾರೆ.

ನೇಮಾ ಬಿಜೆಪಿಯ ಇಂದೋರ್ ನಗರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಬಿಜೆಪಿ ಮುಖಂಡರು ತಮ್ಮ ಕುಟುಂಬ ಸದಸ್ಯರ ಸುರಕ್ಷತೆಗಾಗಿ ಘಟನೆ ನಡೆದ ಸಮಯದಲ್ಲಿ ತಮ್ಮ ಮನೆಯ ಬಾಗಿಲು ಮುಚ್ಚಿದ್ದಾರೆ ಮತ್ತು ಅವರಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ಹೇಳಿದರು. ದುಷ್ಕರ್ಮಿಗಳ ಗುಂಪು ಮನೆಯ ಮುಂಭಾಗದ ಕೋಣೆಯಲ್ಲಿ ಕಿಟಕಿಗಳು ಮತ್ತು ನಾಮಫಲಕ, ಮಡಕೆಗಳಿಗೆ ಹಾನಿ ಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು