‘ಎಮ್ ಎನ್ ಜಿ ಫೌಂಡೇಶನ್’ ವತಿಯಿಂದ ಅರ್ಹ ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಣೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಂಗಳೂರು: . ಜಿಲ್ಲೆಯ ಪ್ರತಿಷ್ಠಿತ ಸಮಾಜಸೇವಾ ಸಂಸ್ಥೆಎಮ್ ಎನ್ ಜಿ ಫೌಂಡೇಶನ್ ವತಿಯಿಂದ ಜಿಲ್ಲೆಯ ಆಯ್ದ ಅರ್ಹ ಬಡ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳಿರುವ ಈದ್ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿ ಇಸಾಕ್ ತುಂಬೆ ಅವರು ಉದ್ಘಾಟಿಸಿದರು.

ಸಂಧರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಸ್ಥಾಪಕ ಇಲ್ಯಾಸ್ ಮಂಗಳೂರು, ರಮದಾನ್ ತಿಂಗಳಲ್ಲಿ ಸಂಸ್ಥೆಯ ವತಿಯಿಂದ ಆಯೋಜಿಸಲಾದ ವಿವಿಧ ಯೋಜನೆಗಳ ಭಾಗವಾಗಿ ಮೊದಲು ರಮದಾನ್ ಕಿಟ್ ವಿತರಣಾಕಾರ್ಯಕ್ರಮ, ನಂತರ ನಮಾಝ್ ವಸ್ತ್ರ ವಿತರಣೆ, ಬಳಿಕ ಖುರಾನ್ ವಿತರಣಾ ಕಾರ್ಯಕ್ರಮ ನಡೆದಿತ್ತು.

ಇದೀಗ ಕೊನೆಯ ಹಂತದಲ್ಲಿ ಈದ್ ಕಿಟ್ ವಿತರಣಾ ಕಾರ್ಯಕ್ರಮ ನಡೆಯುತ್ತಿದೆ. ಇದರ ಪೂರ್ವಭಾವಿಯಾಗಿ ಜಿಲ್ಲೆಯ ನಾನಾ ಭಾಗಗಳಲ್ಲಿ ಸಮೀಕ್ಷೆ ನಡೆಸಿ, ಮಾಹಿತಿ ಸಂಗ್ರಹಿಸಲಾಗಿತ್ತು. ಅದರಿಂದ ಆಯ್ಕೆ ಮಾಡಿದ, ಅರ್ಹ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದರು.

ಸರಕಾರದ ಕೋವಿಡ್ ಶಿಷ್ಟಾಚಾರಗಳನ್ನು ಪಾಲಸಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿ ಫಯಾಝ್ ಮಾಡೂರು ಅವರು ಸ್ವಾಗತಿಸಿ,  ಸಿದ್ದೀಕ್ ಕೊಳಕೆ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಎಮ್.ಎಮ್ ಇಬ್ರಾಹಿಂ ನಂದಾವರ, ಇಮ್ತಿಯಾಝ್ ಕೆದುಂಬಾಡಿ, ಬಶೀರ್ ಪರ್ಲಡ್ಕ, ಮನ್ಸೂರ್ ಬಿ.ಸಿ ರೋಡ್, ಶಿಹಾಬ್ ತಂಙಳ್, ರಫೀಕ್ ಪರ್ಲಿಯಾ, ನವಾಝ್ ಕೋಟೆಕಣಿ, ಶಾಕಿರ್ ಪಾವೂರು ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು