ವಿಧಾನ ಪರಿಷತ್ ಘನತೆಗೆ ಧಕ್ಕೆ: ಕಲಾಪದ ವೇಳೆ ಬ್ಲೂ ಫಿಲಂ ವೀಕ್ಷಿಸಿದ ಶಾಸಕ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು (29-01-2021): ವಿಧಾನ ಪರಿಷತ್‌ ನ ಘನತೆಗೆ ಮತ್ತೆ ಧಕ್ಕೆಯಾಗಿರುವುದು ವರದಿಯಾಗಿದೆ. ಕಲಾಪದ ವೇಳೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಠೋಡ್ ಅವರು ಮೊಬೈಲ್‌ನಲ್ಲಿ ನೀಲಿ ಚಿತ್ರ ವೀಕ್ಷಣೆ ಮಾಡಿದ್ದಾರೆಂದು ಪವರ್ ಟಿವಿ ವರದಿ ಮಾಡಿದೆ.

ಇಂದು ವಿಧಾನಪರಿಷತ್​ ಕಲಾಪ ನಡೆಯುತ್ತಿತ್ತು. ಕಾಂಗ್ರೆಸ್​ ಎಂಎಲ್​ಸಿ ಪ್ರಕಾಶ್ ರಾಥೋಡ್ ಅವರು ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ದೃಶ್ಯ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಘಟನೆ ಕುರಿತು ಮಾತನಾಡಿದ ಪ್ರಕಾಶ್ ರಾಠೋಡ್, ನಾನು ಅಶ್ಲೀಲ ವಿಡಿಯೋ ನೋಡಿಲ್ಲ. ನೂರಾರು ಗ್ರೂಪ್​ಗಳಲ್ಲಿ ಇದ್ದೇನೆ. ಸಾವಿರಾರು ವಿಡಿಯೋ ಇವೆ. ಸ್ಟೋರೇಜ್ ಫುಲ್ ಆಗಿತ್ತು. ಅದನ್ನು ಡಿಲೀಟ್ ಮಾಡ್ತಿದ್ದೆ. ಅದು ಅಶ್ಲೀಲ ವಿಡಿಯೋನಾ ಎನ್ನೋದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಈ ಮೊದಲು ಬಿಜೆಪಿಯ ಮೂವರು ಸಚಿವರು ವಿಧಾನಸಭೆ ಕಲಾಪದ ವೇಳೆ ಬ್ಲೂ ಫಿಲಂ ನೋಡಿ ಮಾದ್ಯಮಗಳ ಕಣ್ಣಿಗೆ ಬಿದ್ದಿದ್ದರು. ಇದೀಗ ಕಾಂಗ್ರೆಸ್ ಶಾಸಕನ ಬಗ್ಗೆ ಇಂತದ್ದೇ ಗಂಭೀರ ಆರೋಪ ಕೇಳಿ ಬಂದಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು