ಮತ್ತೋರ್ವ ಶಾಸಕ ಕೊರೊನಾಗೆ ಬಲಿ

death
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪುಣೆ(28-11-2020): ಕೊರೊನಾ ಸೋಂಕಿಗೆ ಮಹಾರಾಷ್ಟ್ರದ ಎನ್ ಸಿಪಿ ಶಾಸಕ ಭರತ್ ಭಾಲ್ಕೆ ಬಲಿಯಾಗಿದ್ದಾರೆ.

ಭರತ್ ಭಾಲ್ಕೆಗೆ ಅಕ್ಟೋಬರ್ ನಲ್ಲಿ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಅವರು ಚಿಕಿತ್ಸೆಯನ್ನು ಪಡೆದುಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು. ಆದರೆ ಸೋಂಕಿಗೆ ಸಂಬಂಧಿಸಿದ ಲಕ್ಷಣಗಳಿಂದ ಮತ್ತೆ ನ. 9 ರಂದು ಚಿಕಿತ್ಸೆಗೆ ದಾಖಲಾಗಿದ್ದರು.

ಅವರನ್ನು ವೆಂಟಿಲೇಟರ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಭರತ್ ಭಾಲ್ಕೆ ಮಹಾರಾಷ್ಟ್ರದ ಪಂಡರಾಪುರ-ಮಂಗಲವೇದ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದರು.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು