ಮಿತ್ತಬೈಲು: ನ.6ರಂದು ಎಸ್.ವೈ.ಎಸ್. ನಿಂದ ರಬೀಹ್ ಕ್ಯಾಂಪೇನ್, ಕಾರ್ಯಕರ್ತರಿಗೆ ಸನ್ಮಾನ

Share on facebook
Share on twitter
Share on linkedin
Share on whatsapp
Share on telegram
Share on email
Share on print

 

ಬಿ.ಸಿ.ರೋಡ್(04/11/2020): ಮಿತ್ತಬೈಲು ವಲಯ ಸುನ್ನಿ ಯುವಜನ ಸಂಘ (ಎಸ್.ವೈ.ಎಸ್.) ವತಿಯಿಂದ ರಬೀಹ್ ಕ್ಯಾಂಪೇನ್, ಕಾರ್ಯಕರ್ತರಿಗೆ ಸನ್ಮಾನ ಸಮಾರಂಭ ನ.6ರಂದು ಸಂಜೆ 6ಕ್ಕೆ ಮಿತ್ತಬೈಲ್ ಮುಹಿಯುದ್ದೀನ್ ಸಮುದಾಯ ಭವನದಲ್ಲಿ ನಡೆಯಲಿದೆ.

ಮಿತ್ತಬೈಲ್ ಎಂಜೆಎಂ ಮುದರ್ರಿಸ್ ಉಮರುಲ್ ಫಾರೂಕ್ ಫೈಝಿ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮುಹಮ್ಮದ್ ಹನೀಫ್ ಮುಸ್ಲಿಯಾರ್ ವಹಿಸವರು.

ಎಸ್.ವೈ.ಎಸ್. ದ.ಕ. ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಉದ್ಘಾಟಿಸುವರು. ಇರ್ಷಾದ್ ದಾರಿಮಿ ಅಲ್ ಜಝರಿ ಮಿತ್ತಬೈಲು, ಮಿತ್ತಬೈಲ್ ಎಂಜೆಎಂ ಖತೀಬ್ ಅಶ್ರಫ್ ಫೈಝಿ, ಅನ್ಸಾರುದ್ದೀನ್ ಫೈಝಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು