ಪುತ್ತೂರು(12/10/2020): ಮನಯ ಅಂಗಳದಲ್ಲಿ ಆಟ ಆಡುತ್ತಿದ್ದ ಬಾಲಕ ನಾಪತ್ತೆಯಾಗಿರುವ ಘಟನೆ ಕಬಕ ಗ್ರಾಮದ ನೆಹರು ನಗರ ಎಂಬಲ್ಲಿ ನಡದಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಕಬಕ ನೆಹರು ನಗರ ನಿವಾಸಿ ಮಹಮ್ಮದ್ ಆಲಿಯವರ 9 ವರ್ಷದ ಪುತ್ರ ಫೈರೋಜ್ ನಾಪತ್ತೆಯಾದವರು. ಅ.9ರಂದು ಸಂಜೆ ಫೈರೋಜ್ ಮನೆಯಂಗಳದಲ್ಲಿ ಆಟವಾಡುತ್ತಿದ್ದು, ರಾತ್ರಿ ಮನೆಗೆ ಬಾರದೇ ಇರುವುದನ್ನು ಗಮನಿಸಿದ ಮನೆಯವರು ಆಸುಪಾಸಿನಲ್ಲಿ ಹುಡುಕಾಡಿದರು. ಬಳಿಕ ಎಲ್ಲಿಯೂ ಸುಳಿವು ಸಿಗದ ಹಿನ್ನೆಲೆಯಲ್ಲಿ ಅ.11ರಂದು ಬಾಲಕನ ತಾಯಿ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ