ಹರಿಯಾಣ (27-11-2020): ನುಹ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಶುಕ್ರವಾರ ಒಂದು ಮತ್ತು ಏಳು ವರ್ಷದೊಳಗಿನ ನಾಲ್ವರು ಸಹೋದರಿಯರ ಶವಗಳು ಗಂಟಲು ಕತ್ತರಿಸಿಕೊಂಡ ಸ್ಥಿತಿಯಲ್ಲಿ ಪಿಪ್ರೊಲಿ ಗ್ರಾಮದಲ್ಲಿ ಪತ್ತೆಯಾಗಿದೆ. ಅಪರಾಧ ಎಸಗಿದ ಆರೋಪದ ಮೇಲೆ ಅವರ ತಾಯಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮಕ್ಕಳ ತಂದೆ ಈ ಕುರಿತು ಪುನ್ಹಾನಾ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ಮಕ್ಕಳ ತಾಯಿ ಮಕ್ಕಳನ್ನು ಕೊಂದು ಬಳಿಕ ಸ್ವತಃ ಕತ್ತು ಸೀಳಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಗಂಭೀರವಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಇನ್ನು ಮಹಿಳೆ ಯಾಕೆ ಇಂತಹ ಕೃತ್ಯವನ್ನು ಮಾಡಿದ್ದಾಳೆ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.