ಬೆಂಗಳೂರು(25-02-2021): ಸಂಸದರು ಮತ್ತು ಸಚಿವರ ಕಾರು ಖರೀದಿ ದರವನ್ನು ಸರಕಾರ ಹೆಚ್ಚಿಸಿದೆ.
ಹೊಸ ಕಾರು ಖರೀದಿಗೆ 23 ಲಕ್ಷ ಮೊತ್ತ ನೀಡುವುದಕ್ಕೆ ಸರ್ಕಾರ ಸಮ್ಮತಿ ನೀಡಿದೆ. ಕಾರು ಖರೀದಿಗೆ ಹೆಚ್ಚು ಮೊತ್ತವನ್ನು ನೀಡಬೇಕೆಂಬ ಸಂಸದರ, ಸಚಿವರ ಬೇಡಿಕೆಯನ್ನು ಸ್ವೀಕರಿಸಿ ಮೊತ್ತವನ್ನು ಹೆಚ್ಚಳಗೊಳಿಸಲಾಗಿದೆ. ಈ ಹಿಂದೆ 22 ಲಕ್ಷರೂ.ವನ್ನು ನೀಡಲಾಗುತ್ತಿತ್ತು.
ಲಾಕ್ ಡೌನ್ ಬಳಿಕ ಜನರ ಬದುಕು ಸಂಕಷ್ಟದಲ್ಲಿದೆ. ನಿರಂತರ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಜನರು ಕಂಗೆಟ್ಟಿದ್ದಾರೆ. ಪೆಟ್ರೋಲ್ ಡಿಸೇಲ್ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಇದರ ಮಧ್ಯೆ ಜನಸಾಮಾನ್ಯರ ಮೇಲೆ ಹೊರೆ ಹಾಕಿ ಸಂಸದರ, ಸಚಿವರ ಐಶಾರಾಮಿ ಕಾರು ಖರೀದಿಗೆ ಹೆಚ್ಚಿನ ಅನುದಾನ ನೀಡಿರುವುದು ಅಚ್ಚರಿಯನ್ನು ಉಂಟುಮಾಡಿದೆ.