ಲಕ್ನೋ (21-02-2021): 2008 ರ ಏಪ್ರಿಲ್ನಲ್ಲಿ ತನ್ನ ಕುಟುಂಬದ ಏಳು ಸದಸ್ಯರನ್ನು ಕೊಂದಿದ್ದಕ್ಕಾಗಿ ಮರಣದಂಡನೆ ಶಿಕ್ಷೆಗೊಳಗಾದ ಶಬ್ನಮ್, ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮತ್ತು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಹೊಸ ಕ್ಷಮಾಪನಾ ಅರ್ಜಿಯನ್ನು ಸಲ್ಲಿಸಿದ್ದಾರೆ.
ಡೈರೆಕ್ಟರ್ ಕುಮಾರ್ ಅವರ ಪ್ರಕಾರ, ಕ್ಷಮಾದಾನಕ್ಕಾಗಿ ಶಬ್ನಮ್ ಈ ಹಿಂದೆ ಉತ್ತರ ಪ್ರದೇಶ ರಾಜ್ಯಪಾಲರನ್ನು ಸಂಪರ್ಕಿಸಿದ್ದರು. ಆದರೆ ಪಟೇಲ್ ಅವರ ಅರ್ಜಿಯನ್ನು ತಿರಸ್ಕರಿಸಿದ್ದರು.
ಮೇ 25, 2015 ರ ಸುಪ್ರೀಂ ಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೊಳಗಾದ ಖೈದಿ ಶಬ್ನಮ್ ತನ್ನ ವಕೀಲರ ಮೂಲಕ ಯುಪಿ ಗವರ್ನರ್ ಗೆ ಕ್ಷಮಾಪನಾ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ರಾಂಪುರ್ ಜೈಲು ಅಧೀಕ್ಷಕರು ತಿಳಿಸಿದ್ದಾರೆ.
ಇಬ್ಬರು ವಕೀಲರು ಶುಕ್ರವಾರ ರಾಂಪುರ್ ಜೈಲಿನಲ್ಲಿ ಶಬ್ನಮ್ ಅವರನ್ನು ಭೇಟಿ ಮಾಡಿದ್ದಾರೆ ಮತ್ತು ಉತ್ತರ ಪ್ರದೇಶದ ರಾಜ್ಯಪಾಲರಿಗೆ ಕ್ಷಮಾಪನಾ ಅರ್ಜಿಯನ್ನು ಕಳುಹಿಸುವಂತೆ ಮನವರಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.