ಮೆಲ್ಕಾರ್(22/10/2020); ‘ಅಲ್ ತಕ್ದೀಸ್ ಆಯುರ್ವೇದ ವೆಲ್ ನೆಸ್ ಸೆಂಟರ್’ ಮೆಲ್ಕಾರ್ ಯುನಿವರ್ಸಿಟಿ ರಸ್ತೆಯ ಸುಲ್ತಾನ್ ಪ್ಲಾಝಾದಲ್ಲಿ ಮಾಲಕಿ ಮರಿಯಮ್ಮ ಮೆಲ್ಕಾರ್ ಅವರ ನೇತೃತ್ವದಲ್ಲಿ ಶುಭಾರಂಭಗೊಂಡಿತು.
ಹಾರ್ವೆಸ್ಟ್ ಅಕಾಡೆಮಿ ಚೆನ್ನೈ ಇದರ ವೆಲ್ ನೆಸ್ ಕನ್ಸಲ್ ಟೆಂಟ್ ಬಿನಾಯ್ ಜೋಸೆಫ್ ಅಲ್ ತಕ್ದೀಸ್ ಆಯುರ್ವೇದ ವೆಲ್ ನೆಸ್ ಸೆಂಟರ್ ನು ಉದ್ಘಾಟಿಸಿದ್ದಾರೆ.
ಈ ವೇಳೆ ಮುಖ್ಯ ಅತಿಥಿಯಾಗಿ ಎಂ.ಐ.ಲೈಫ್ ಸ್ಟೈಲ್ ಇದರ ರಾಷ್ಟ್ರೀಯ ತಂಡದ ಕೋಅರ್ಡಿನೇಟರ್ ಸಲೀಮ್ ನೆಟ್ಟನಾ, ಮೋಳಿ ಶಾಜಿ, ಆಯಿಷಾ, ಜುಬೈರ್ ಮೆಲ್ಕಾರ್, ಅಬ್ಬಾಸ್ ಮೆಲ್ಕಾರ್, ಸಮೀಮಾ, ಸಂಶುದ್ದೀನ್, ಅಜೀಜ್ ಕಣ್ಣೂರು, ಮೆಹಬೂಬುಲ್ಲಾ, ಉನೈಸ್, ಉಕ್ಕಾಸ್, ಅಸ್ತರ್, ಉಬೈದ್, ಕಾಮಿಲ್, ಕಬೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ವೆಲ್ ನೆಸ್ ಸೆಂಟರ್ ನಲ್ಲಿ ಆಯುಷ್ ಮಂತ್ರಾಲಯದಿಂದ ಮಾನ್ಯತೆ ಪಡೆದ ಆಯುಷ್ ಉತ್ಪನ್ನಗಳ ಸಂಗ್ರಹವಿರಲಿದ್ದು, ವಿವಿಧ ಗಿಡಮೂಲಿಕೆಗಳಿಂದ ಆಯುಷ್ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತದೆ. ಯಾವುದೇ ಸೈಡ್ ಎಫೆಕ್ಟ್ ಇಲ್ಲದ ಔಷಧ ಗುಣವಿರುವ ಈ ಉತ್ಪನ್ನಗಳು ಉತ್ತಮ ಆರೋಗ್ಯಕ್ಕೆ ರಾಮಬಾಣವನ್ನಾಗಿ ತೆಗೆದುಕೊಳ್ಳಬಹುದಾಗಿದೆ.