ಕೊರೋನ ನಿಯಂತ್ರಣ ಹಿನ್ನೆಲೆ:ಜನವರಿ 31ರ ವರೆಗೆ ನಿರ್ಬಂಧ ಮುಂದುವರಿಕೆ; ಸಿ.ಎಂ. ಬೊಮ್ಮಾಯಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯದಲ್ಲಿ ಆರೋಗ್ಯ ಇಲಾಖೆ ನೀಡುತ್ತಿರುವ ಕೊರೋನಾ ವರದಿ ಪ್ರಕಾರ ಕೋವಿಡ್ ಪಾಸಿಟಿವ್ ದರ ಹೆಚ್ಚಾಗುತ್ತಿದ್ದು ಜನವರಿ 31ರ ವರೆಗೆ ಹೆಚ್ಚುವರಿ ನಿಯಂತ್ರಣ ಜಾರಿಗೊಳಿಸಿದೆ.

ಈ ಬಗ್ಗೆ ಮೀಟಿಂಗ್ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು,ಸರ್ಕಾರದ ನಿರ್ಧಾರದ ಪ್ರಕಾರ ಜನವರಿ 31ರ ವರೆಗೆ ಎಲ್ಲಾ ಪ್ರತಿಭಟನೆ ಹಾಗೂ ರ್ಯಾಲಿ ಗಳನ್ನು ನಿಷೇಧಿಸಲಾಗಿದೆ. ಹಾಗೂ ಶಾಲೆಗಳನ್ನು ಮುಚ್ಚುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ವಹಿಸಲಾಗಿದೆ.

ಮದುವೆ ಸಮಾರಂಭಗಳು ತರೆದ ಸ್ಥಳದಲ್ಲಾದರೆ 200 ಮಂದಿ ಹಾಗೂ ಒಳಾಂಗಣದಲ್ಲಾದರೆ 100 ಮಂದಿಗೆ ಸೇರಲು ಅವಕಾಶ ಕಲ್ಪಿಸಲಾಗಿದೆ.

ದೈವಸ್ಥಾನ,ಮಸೀದಿ ಮತ್ತು ಚರ್ಚ್ ಗಳಲ್ಲಿ ಎಂದಿನಂತೆ ಪೂಜೆ ನಡೆಸಬಹುದು.ಆದರೆ ಭಕ್ತರ ಪ್ರವೇಶಕ್ಕೆ ಮಿತಿ ಇರಬೇಕು ಎಂದು ಸಚಿವ ಆರ್ ಅಶೋಕ್ ಹೇಳಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು