ಮಂಗಳೂರು(24/10/2020): ಮೀಲಾದುನ್ನಬೀ ಆಚರಣೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಾರ್ಗಸೂಚಿಯೊಂದನ್ನು ಪ್ರಕಟಿಸಿದ್ದಾರೆ. ಅಕ್ಟೋಬರ್ 29ರಂದು ದ.ಕ.ಜಿಲ್ಲೆಯಲ್ಲಿ ಮೀಲಾದುನ್ನಬೀ ಆಚರಿಸಲಾಗುತ್ತಿದೆ.
ಮೀಲಾದುನ್ನಬೀ ದಿನದಂದು ಯಾವುದೇ ವಿಧದ ಜಾಥ, ಮೆರವಣಿಗೆ, ಸಭೆ ಸಮಾರಂಭ ನಡೆಸುವುದನ್ನು ನಿಷೇಧಿಸಲಾಗಿದೆ. ಮೊಹಲ್ಲಾಗಳಲ್ಲಿ ಹಗಲು ರಾತ್ರಿಯ ಪ್ರವಚನ ಸಭೆಗಳನ್ನು ಮಾಡಕೂಡದು. ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಅವಕಾಶವಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ, ಡಿಜಿಟಲ್ ಸೌಂಡ್ ವ್ಯವಸ್ಥೆ ಮಾಡಲೇಕೂಡದು.
ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದ ಕೆಳಗಿನವರು ಮನೆಯಲ್ಲಿಯೇ ಮೀಲಾದುನ್ನಬೀ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.