ಅ.19 ರಿಂದ ಕರ್ನಾಟಕ ಫೈಝೀಸ್ ಅಸೋಸಿಯೇಷನ್ ನಿಂದ ಮೀಲಾದ್ ಅಭಿಯಾನ

meelad meet
Share on facebook
Share on twitter
Share on linkedin
Share on whatsapp
Share on telegram
Share on email
Share on print

ವಿಟ್ಲ(18-10-2020): ಕರ್ನಾಟಕ ರಾಜ್ಯ ಫೈಝೀಸ್ ಉಲಮಾ ಒಕ್ಕೂಟದ ಆಶ್ರಯದಲ್ಲಿ ವಿಶ್ವ ಪ್ರವಾದಿ ಮುಹಮ್ಮದ್ (ಸ.ಅ) ಜನ್ಮತಿಂಗಳಲ್ಲಿ  ‘ಸಮಕಾಲೀನ ಸಮಸ್ಯೆಗಳಿಗೆ ಪ್ರವಾದಿ ಚರ್ಯೆ ಪರಿಹಾರ’ ಎಂಬ ಘೋಷವಾಕ್ಯದೊಂದಿಗೆ  ಮಿಲಾದ್ ಅಭಿಯಾನವು  ಅಕ್ಟೋಬರ್ 19 ರಿಂದ  ನವಂಬರ್ 14 ರವರೆಗೆ ರಾಜ್ಯದ  ವಿವಿಧ ಜಿಲ್ಲೆಗಳ ಆಯ್ದ 27 ಸ್ಥಳಗಳಲ್ಲಿ ಮೀಲಾದ್ ಮೀಟ್ ನಡೆಯಲಿದೆ.

ಪ್ರವಾದಿವರ್ಯರ ಚರ್ಯೆ ಎಲ್ಲಾ ಕಾಲ, ಸನ್ನಿವೇಶ ಮತ್ತು ಸ್ಥಿತಿಗೆ ಸಮರ್ಪಕವಾಗಿ ಹೊಂದಿಕೊಳ್ಳುವಷ್ಟು ಪರಿಪೂರ್ಣತೆಯಿಂದ ಕೂಡಿರುವುದರಿಂದ ಸರ್ವ ಸಮಸ್ಯೆಗಳ ಪರಿಹಾರ ಪ್ರವಾದಿ ಚರ್ಯೆಯಿಂದ ಮಾತ್ರ ಸಾದ್ಯವೆಂಬುದರ ಕುರಿತು

27 ದಿನಗಳ ಕಾಲ ನಡೆಯಲಿರುವ ಈ ಅಭಿಯಾನವು  ಅಕ್ಟೋಬರ್ 19ರಂದು  ಕರಾಯ ಮಸೀದಿ ವಠಾರದಲ್ಲಿ ಉದ್ಘಾಟನೆಗೊಳ್ಳಲಿದೆ.

ರಾಜ್ಯ ಫೈಝೀಸ್ ಉಲಮಾ ಒಕ್ಕೂಟದ ಅಧ್ಯಕ್ಷರಾದ ಉಸ್ಮಾನುಲ್ ಫೈಝಿ ತೋಡಾರ್ ರವರು ಅಧ್ಯಕ್ಷತೆ ವಹಿಸಲಿದ್ದು, ಸೈಯದ್ ಅಹ್ಮದ್  ಪೂಕೋಯ ತಂಙಲ್ ಪುತ್ತೂರು ಉದ್ಘಾಟಿಸಲಿದ್ದಾರೆ. ರಾಜ್ಯ ದಾರಿಮೀಸ್ ಒಕ್ಕೂಟದ ಅಧ್ಯಕ್ಷರಾದ ಎಸ್.ಬಿ. ಮುಹಮ್ಮದ್ ದಾರಿಮಿ ಮುಖ್ಯ ಭಾಷಣ ಮಾಡಲಿದ್ದಾರೆ. ಸೈಯದ್ ಜುನೈದ್ ಜಿಫ್ರೀ ತಂಙಳ್ ಆತೂರು ಮೌಲಿದ್ ಹಾಗೂ ದುಆಃ ನೇತೃತ್ವ ವಹಿಸಲಿದ್ದಾರೆ. ಕರಾಯ ಮುದರ್ರಿಸ್ ಹೈದರ್ ದಾರಿಮಿ ಹಾಗೂ  ಉಮರಾ ಸಾದಾತ್ ಪ್ರಮುಖರು ಭಾಗವಹಿಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಮಿತ್ತಬೈಲ್, ಮೂಡಬಿದ್ರೆ , ಕಲ್ಲಡ್ಕ, ಸಜಿಪ, ಕನ್ಯಾನ, ಆತೂರು, ಬಪ್ಪಳಿಗೆ, ಮಾಡನ್ನೂರ್, ಕಕ್ಕಿಂಜೆ, ಸುಳ್ಯ  ಕೊಡಗು ಜಿಲ್ಲೆಯ ಎಮ್ಮೆಮಾಡು, ಸಿದ್ದಾಪುರ , ಜ್ಯೋತಿನಗರ, ಕುಶಾಲ ನಗರ, ಶನಿವಾರಸಂತೆ, ವಿರಾಜಪೇಟೆ , ಒಳಮಾಳಂ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಿಳಗೊಳ, ಉಡುಪಿ ಜಿಲ್ಲೆಯ ರೆಂಜಾಳ,  ಹಾಸನ ಜಿಲ್ಲೆಯ ಜಾವಗಲ್, ಆನೆಮಹಲ್, ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಬೆಂಗಳೂರಿನಲ್ಲಿಯೂ ವಿವಿಧ ದಿನಾಂಕದಂದು ಉನ್ನತ ಉಲಮಾ ಉಮರಾ ಸಾದಾತುಗಳ ನೇತೃತ್ವದಲ್ಲಿ ಮಿಲಾದ್ ಮೀಟ್ ನಡೆಯಲಿದೆ.

ನವಂಬರ್ 14 ರಂದು ಮಿತ್ತಬೈಲಿನಲ್ಲಿ ಸಮಾರೋಪ ಸಮಾವೇಶ ನಡೆಯಲಿದ್ದು ರಾಜ್ಯಾಧ್ಯಕ್ಷರಾದ ಉಸ್ಮಾನುಲ್ ಫೈಝಿ ತೋಡಾರ್ ಅಧ್ಯಕ್ಷತೆ ವಹಿಸುವರು. ಸಮಸ್ತ ಉಲಮಾ ಒಕ್ಕೂಟದ ಕೇಂದ್ರ ಮುಶಾವರ ಸದಸ್ಯರೂ ಮಂಗಳೂರು ಖಾಝಿಗಳು ಆದ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉದ್ಘಾಟಿಸಲಿರುವರು. ಸಮಸ್ತ  ಕೇಂದ್ರ ಮುಶಾವರ ಸದಸ್ಯರಾದ ಬಂಬ್ರಾಣ ಅಬ್ದುಲ್  ಖಾದರ್ ಅಲ್ ಖಾಸಿಮಿ ಮುಖ್ಯ ಭಾಷಣ ಮಾಡಲಿದ್ದು, ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಲ್ ಬೆಳ್ತಂಗಡಿ ಮೌಲಿದ್ ಪಾರಾಯಣ ಹಾಗೂ ದುಆಃ ನೇತೃತ್ವ ವಹಿಸಲಿರುವರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಎಂ.ಎಂ.ಅಬ್ದುಲ್ಲಾ ಫೈಝಿ, ಅಮೀರ್ ತಂಙಳ್, ಮೂಸಲ್  ಫೈಝಿ, ಇಬ್ರಾಹಿಮ್ ಬಾಖವಿ , ಕನ್ಯಾನ ಸುಲೈಮಾನ್ ಫೈಝಿ, ಎಸ್.ಬಿ. ದಾರಿಮಿ, ಕುಕ್ಕಿಲ ದಾರಿಮಿ, ಅಝೀಝ್ ದಾರಿಮಿ,  ಶರೀಫ್ ಫೈಝಿ ಕಡಬ ಇನ್ನಿತರ ಅನೇಕ ಉಲಮಾ, ಉಮರಾ ನೇತಾರರು ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯಫೈಝೀಸ್ ಪ್ರಧಾನ ಕಾರ್ಯದರ್ಶಿ ಅಶ್ರಫ್ ಫೈಝಿ ಮಿತ್ತಬೈಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

 

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು