ಬಿಡಬ್ಲ್ಯೂಎಫ್ ಭಾರತಕ್ಕೆ ಪದಕ ಖಚಿತ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಿಡಬ್ಲ್ಯೂಎಫ್ ವಿಶ್ವ ಚಾಂಪಿಯನ್‌ಶಿಪ್‌ ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ಹಾಗೂ ಲಕ್ಷ್ಯ ಸೇನ್ ಪದಕ ಗೆಲ್ಲೋದು ಖಚಿತವಾಗಿದೆ. ಕಿದಂಬಿ ಶ್ರೀಕಾಂತ್ ಮತ್ತು ಲಕ್ಷ್ಯ ಸೇನ್ ಪಂದ್ಯಾವಳಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದ್ದು, ಈ ಮೂಲಕ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಭಾರತಕ್ಕೆ ಪದಕಗಳು ಖಚಿತವಾಗಿವೆ. ನಾಳೆ ನಡೆಯಲಿರುವ ಮೊದಲ ಸೆಮಿಫೈನಲ್‌ನಲ್ಲಿ ಶ್ರೀಕಾಂತ್ ಮತ್ತು ಸೇನ್ ಮುಖಾಮುಖಿಯಾಗುವುದರಿಂದ ಭಾರತಕ್ಕೆ ಕನಿಷ್ಠ ಬೆಳ್ಳಿ ಪದಕ ಖಚಿತವಾಗಿದೆ. ಶ್ರೀಕಾಂತ್ ಕೇವಲ 26 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ 21-8 21-7ರಿಂದ ನೆದರ್ಲೆಂಡ್ಸ್‌ನ ಮಾರ್ಕ್ ಕ್ಯಾಲ್ಜೋವ್ ಅವರನ್ನು ಸೋಲಿಸಿ, ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಲಕ್ಷ್ಯ ಸೇನ್  ಒಂದು ಗಂಟೆ ಏಳು ನಿಮಿಷಗಳ ಕಾಲ ನಡೆದ ಮೂರು ಗೇಮ್‌ಗಳ ಮುಖಾಮುಖಿಯಲ್ಲಿ ಚೀನಾದ ಜುನ್ ಪೆಂಗ್ ಝಾವೊ ಅವರನ್ನು 21-15 15-21 22-20 ಅಂತರದಿಂದ ಸೋಲಿಸಿ, ಸೆಮೀಸ್ ಪ್ರವೇಶಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು