ಬೆಂಗಳೂರು(24-11-2020): ಬೆಂಗಳೂರಿನಲ್ಲಿ ನವೆಂಬರ್ 25(ನಾಳೆ) ರಂದು ಪ್ರಾಣಿ ವಧೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ.
ನವೆಂಬರ್ 25 ರಂದು ಸಾಧು ವಾಸ್ವಾನಿ ಜಯಂತಿ ಸಂದರ್ಭದಲ್ಲಿ ಬಿಬಿಎಂಪಿ ಮಿತಿಯಲ್ಲಿ ಮಾಂಸ ಮಾರಾಟ ಮತ್ತು ವಧೆ ನಿಷೇಧಿಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತಿಳಿಸಿದೆ.
ಬಿಜೆಪಿಯ ರಾಜ್ಯ ಘಟಕವು ಇತ್ತೀಚೆಗೆ ಈ ಕುರಿತು ಮನವಿ ಮಾಡಿದ್ದು, ನಂತರ ಸರ್ಕಾರ ಗೋಹತ್ಯೆಯನ್ನು ನಿಷೇಧಿಸಬೇಕು ಎಂದು ಸೂಚಿಸಿತ್ತು. ಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಮುಖ್ಯ ಕಾರ್ಯದರ್ಶಿ ಸಿ ಟಿ ರವಿ ರಾಜ್ಯ ಪಶುಸಂಗೋಪನೆ ಸಚಿವ ಪ್ರಭೌ ಚೌಹಾನ್ ಅವರೊಂದಿಗೆ ಚರ್ಚೆ ನಡೆಸಿದ್ದರು.
ಗೋಹತ್ಯೆ ವಿರುದ್ಧ ಕಾನೂನು ಜಾರಿಗೆ ತರಲು ಬಿಜೆಪಿ ಸರ್ಕಾರ ಕೂಡ ಒಂದು ಸಮಿತಿಯನ್ನು ರಚಿಸಿದೆ. ಮುಂದಿನ ವಿಧಾನಸಭೆಯ ಅಧಿವೇಶನದಲ್ಲಿ ಕಾನೂನು ಜಾರಿಗೆ ತರಲಾಗುವುದು ಎಂದು ಬಿಜೆಪಿ ರಾಜ್ಯ ಘಟಕ ತಿಳಿಸಿದೆ.