ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ | ಏನಿದು MDMA ಡ್ರಗ್ ಮಾತ್ರೆ..?

mdma
Share on facebook
Share on twitter
Share on linkedin
Share on whatsapp
Share on telegram
Share on email
Share on print

ಡ್ರಗ್ಸ್ ಮಾಫಿಯಾ ಜಗತ್ತಿಗೆ ಹೊಸದೇನಲ್ಲ. ಇದುವರೆಗೂ‌ ಈ‌ ಡ್ರಗ್ಸ್ ಮಾಫಿಯಾವನ್ನು ಸಂಪೂರ್ಣವಾಗಿ ತಡೆದುಹಾಕಲು ಪೊಲೀಸ್ ವ್ಯವಸ್ಥೆಗೆ ಯಾಕೆ ಸಾಧ್ಯವಾಗಿಲ್ಲ ಎಂಬ ಯಕ್ಷ ಪ್ರಶ್ನೆ‌ ಕಾಡುತ್ತದೆ. ಡ್ರಗ್ಸ್ ಬಗ್ಗೆ ಆಗೊಮ್ಮೆ- ಈಗೊಮ್ಮೆ ಪತ್ರಿಕೆಯ ‌ಯಾವುದೋ ಮೂಲೆಯಲ್ಲಿ ಸಣ್ಣ ಸುದ್ದಿಯಾಗಿ, ಸಿನೆಮಾಗಳ ಒಂದಷ್ಟು ದೃಶ್ಯಗಳಲ್ಲಿ ನೋಡಿದ ನೆನಪು ಬರುತ್ತದೆ.

ಪ್ರಸ್ತುತ ನ್ಯೂಸ್ ಚಾನೆಲ್‌ ಗಳ ಟಿ ಆರ್ ಪಿ ಕೇಂದ್ರಿತ ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದ ಸುದ್ದಿ ದಿ‌ನದಿಂದ‌ ದಿನಕ್ಕೆ ಹೊಸ ತಿರುವು ಪಡೆಯುತ್ತಿದೆ. ವಿಚಾರಣೆ ಒಳಗಾದ ಕೆಲವು ನಟನಟಿಯರಿಂದ MDMA ಎಂಬ ಡ್ರಗ್ ಮಾತ್ರೆಯನ್ನು ಸೇವಿಸಿದ್ದರ ಬಗ್ಗೆ ಮಾಹಿತಿ‌ ದೊರೆತಿದೆ.

ಹಾಗಾದರೆ ಏನಿದು MDMA .? ಇದನ್ನು ಸೇವಿಸಿದರೆ ದೇಹ ಮತ್ತು ಮನಸಿನ ಮೇಲಾಗುವ ದುಷ್ಪರಿಣಾಮಗಳೇನು..?ಎಂಬುದರ ಬಗ್ಗೆ ಸರ್ಕಾರದ ‘National Institute on Drug Abuse‘ ವೆಬ್ಸೈಟ್ ನಲ್ಲಿ ಪ್ರಕಟವಾಗಿರುವ ಬರಹವನ್ನು ಇಂಗ್ಲಿಷ್ ನಿಂದ ಕನ್ನಡಕ್ಕೆ ‘ವೈಶಾಲಿ‌ ದುರ್ಗಪ್ಪ’ ಅವರು ತಂದಿದ್ದಾರೆ.

ಎಂಡಿಎಂಎ ಎಂದರೇನು..?

3,4-ಮಿಥೈಲಿನ್ ಡೈ ಆಕ್ಸಿ – ಹೆಪ್ಟಾಮೈನ್ (3,4-methylenedioxy-methamphetamine(MDMA)

ಇದು ವ್ಯಕ್ತಿ ಒಬ್ಬನ ಬಾಹ್ಯ ಪ್ರಪಂಚದ ಬಗ್ಗೆ ತನಗಿರುವ ಗ್ರಹಿಕೆ ಹಾಗೂ ಮನಸ್ಥಿತಿಯನ್ನು ಬದಲಾಯಿಸುವಂತಹ ಒಂದು ಸಂಶ್ಲೇಷಿತ (ಸಿಂಥೆಟಿಕ್) ಡ್ರಗ್ ಆಗಿದೆ. ಇದು ರಾಸಾಯನಿಕವಾಗಿ ಉತ್ತೇಜಕ ಹಾಗೂ ಭ್ರಾಮಕಗಳಿಗೆ ಹೋಲುತ್ತದೆ. ಈ ಡ್ರಗ್ ಅನ್ನು ಸೇವಿಸಿದ ವ್ಯಕ್ತಿಯಲ್ಲಿ ದೇಹಕ್ಕೆ ಇದ್ದಕ್ಕಿದ್ದಂತೆ ಶಕ್ತಿ ದೊರೆಯುವುದು, ಅತೃಪ್ತ ಮಾನಸಿಕ ಸಂತೋಷ ಹೊಂದುವುದು. ಭಾವನಾತ್ಮಕವಾಗಿ ಬೆಚ್ಚಗಿನ ಅನುಭವ ಹೊಂದಿ ತನಗರಿವಿಲ್ಲದ ಯಾವುದೋ ಲೋಕದಲ್ಲಿ ವಿಹರಿಸುವಂತಹ ಭಾವನೆಯಲ್ಲಿ ತೇಲುವರು.

ರಾಸಾಯನಿಕ Molecular ಪದವನ್ನು ಸಂಕ್ಷಿಪ್ತಗೊಳಿಸಿ. Molly ಎಂಬ ಹೆಸರಿನಿಂದ MDMA ಡ್ರಗ್ ಅನ್ನು ಯುವಜನರಲ್ಲಿ ಪ್ರಚಲಿತ ಗೊಳಿಸಿದ್ದಾರೆ. ಮೊದಲೆಲ್ಲಾ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿಗಳಲ್ಲಿ ದೊರೆಯುತ್ತಿದ್ದ ಡ್ರಗ್ ಇಂದು ಕಾಲೇಜು ಅಂಗಳದವರೆಗೂ ಕಾಲಿಟ್ಚಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ.

ವ್ಯಸನಿಗಳು ಡ್ರಗ್ ಅನ್ನು ಹೆಚ್ಚಾಗಿ ಮಾತ್ರೆ ಅಥವಾ ಕ್ಯಾಪ್ಸುಲ್ ರೂಪದಲ್ಲಿ ಸೇವನೆ ಮಾಡುವರು. ಕೆಲವರು ಇದನ್ನು ದ್ರವ ರೂಪದಲ್ಲಿ ಸೇವಿಸಿದರೆ, ಹೆಚ್ಚಿನವರು ಡ್ರಗ್ ಪುಡಿಯನ್ನು ಉಸಿರುಗಟ್ಟಿ ಒಳಸೇದುವ ಮೂಲಕ ಸೇವಿಸುವರು. ಸ್ಫಟಿಕ ರೂಪದ ಪುಡಿಯನ್ನು ಹೆಚ್ಚಾಗಿ ಕ್ಯಾಪ್ಸುಲ್ ರೂಪದಲ್ಲಿ ಮಾರಾಟ ಮಾಡುವುದು ಪ್ರಚಲಿತದಲ್ಲಿದೆ. ಇಷ್ಟೇ ಅಲ್ಲದೆ Molly ಡ್ರಗ್ ನ್ನು ಆಲ್ಕೋಹಾಲ್ ಅಥವಾ ಗಾಂಜಾದೊಟ್ಟಿಗೆ ಸೇರಿಸಿ ತೆಗೆದುಕೊಳ್ಳುವುದು ಸಹ ಕೆಲವರಲ್ಲಿ ರೂಢಿಯಲ್ಲಿದೆ.

MDMA ಡ್ರಗ್ ನ ವ್ಯಸನಿಗಳಲ್ಲಿ ಮೆದುಳಿನ ಮೇಲೆ ಪರಿಣಾಮ ಬೀರಿ, ಬಾಹ್ಯ ನಡವಳಿಕೆಗಳಲ್ಲಿ ಬದಲಾವಣೆಯನ್ನು ತರುವಲ್ಲಿ ಮೂರು ರಾಸಾಯನಿಕಗಳು ಮುಖ್ಯ ಪಾತ್ರ ವಹಿಸುತ್ತದೆ. ಅವುಗಳೆಂದರೆ,

1.ಡೋಪಮೈನ್ (Dopamine): ಈ ರಾಸಾಯನಿಕವು ದೇಹಕ್ಕೆ ಹೆಚ್ಚು ಶಕ್ತಿಯನ್ನು ಒದಗಿಸಿ, ವ್ಯಕ್ತಿಯ ನಡವಳಿಕೆಯನ್ನು ಇದ್ದಕ್ಕಿದ್ದಂತೆ ಬದಲಾಯಿಸುವುದು.

2.ಸೆರಟೋನಿನ್ (Serotonin): ವ್ಯಕ್ತಿಯಲ್ಲಿ ಮನಸ್ಥಿತಿಯ ಬದಲಾಯಿಸುವುದು, ಹಸನಾಗಿಸುವುದು ಅಥವಾ ನಿದ್ರೆ ಬರಿಸುವುದು ಈ ರಾಸಾಯನಿಕದ ಕೆಲಸವಾಗಿದೆ. ಹಾಗೂ ಅವರಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿಸುವಂತಹ ಹಾರ್ಮೋನುಗಳನ್ನು ಸ್ರವಿಸುವಲ್ಲಿ ಪಾತ್ರ ವಹಿಸುತ್ತದೆ. ಸೆರಟೋನಿನ್ ಹೆಚ್ಚು ಉತ್ಪಾದನೆ ಆಗುವುದರಿಂದ ಭಾವಾತಿರೇಕ ಉಂಟಾಗುವುದು, ಜೊತೆಯಲ್ಲಿರುವವರ ಮೇಲೆ ಎಂದೂ ಕಾಣದ ಪ್ರೀತಿ ಉಂಟಾಗುವುದು, ಎಲ್ಲೋ ಹೇಳಿದಂತಹ ಅನುಭವವೂ ಆಗುವುದುಂಟು.

3.ನೊರ್ಪೈನ್ಫ್ರಿನ್ (Norepinephrine): ರಕ್ತದೊತ್ತಡ ಹಾಗೂ ಹೃದಯ ಬಡಿತ ಹೆಚ್ಚಾಗುವುದು, ವಿಶೇಷವಾಗಿ ಹೃದಯ ಸಂಬಂಧಿ ಕಾಯಿಲೆ ಇರುವಂತಹವರಿಗೆ ಈ ರಾಸಾಯನಿಕದ ಪ್ರಮಾಣ ದೇಹದಲ್ಲಿ ಹೆಚ್ಚಾದಲ್ಲಿ ಮಾರಣಾಂತಿಕವೂ ಆಗಬಹುದು.

ಇದರೊಟ್ಟಿಗೆ, ವಾಕರಿಕೆ ಬರುವುದು, ಮಾಂಸಖಂಡಗಳಲ್ಲಿ ಸೆಳೆತ ಉಂಟಾಗುವುದು, ತಮಗರಿವಿಲ್ಲದೆ ಹಲ್ಲು ಕಡಿಯುವುದು, ಕಣ್ಣು ಮಂಜಾದಂತಾಗುವುದು, ಬೆವರುವುದು, ಚಳಿ ಯಾಗುವಂತಹ ಆರೋಗ್ಯ ಸಂಬಂಧಿ ಪರಿಣಾಮಗಳನ್ನು ಅನುಭವಿಸುವರು.

MDMA ಡ್ರಗ್ ಗನ್ನು ಒಮ್ಮೆ ಸೇವಿಸಿದರೆ, ಅದರ ಪರಿಣಾಮ ಕನಿಷ್ಠ ಮೂರರಿಂದ ಆರು ಗಂಟೆಗಳವರೆಗೆ ಇರಬಹುದು. ಮೊದಲ ಡೋಸ್ ನ ಪರಿಣಾಮ ಕಡಿಮೆಯಾಗುತ್ತಾ ಹೋದಂತೆ ಕೆಲವೊಬ್ಬರು ಮತ್ತೊಂದು ಡೋಸ್ ನ ಮೊರೆ ಹೋಗುವರು.ಡೋಸ್ ಕಡಿಮೆ ಆದರೂ ಸಹ, ಕೆಲವು ವಾರಗಳವರೆಗೆ, ವ್ಯಕ್ತಿಯಲ್ಲಿ ದೈಹಿಕವಾಗಿ ಕಿರಿಕಿರಿ ಅನುಭವಿಸುವುದು, ಆಕ್ರಮಣಕಾರಿ ನಡವಳಿಕೆ, ಖಿನ್ನತೆಗೆ ಒಳಗಾದ ಭಾವ, ನಿದ್ರಾಹೀನತೆ, ಆತಂಕ, ನೆನಪಿನ ಶಕ್ತಿಯ ಕೊರತೆ, ಹಸಿವಾಗದೆ ಇರುವಂತಹ ಅನುಭವ, ಲೈಂಗಿಕತೆಯಲ್ಲಿ ಉತ್ಸಾಹದ ಕೊರತೆಯಂತಹ ಪರಿಣಾಮಗಳನ್ನು ಎದುರಿಸಬೇಕಾಗಬಹುದು.

‘MDMA’ ಡ್ರಗ್ ನ ವೈದ್ಯಕೀಯ ಪ್ರಾಮುಖ್ಯತೆ

1970 ರಲ್ಲಿ ಮೊದಲ ಬಾರಿಗೆ MDMA ಡ್ರಗ್ ಅನ್ನು ಮನೋವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸಲಾಯಿತು.(ಟಾಪ್ ತೆರಫಿ ಅಂತಹ ಮಾನಸಿಕ ಚಿಕಿತ್ಸೆಗಳಲ್ಲಿ) ಆದರೆ ವ್ಯಸನಿಗಳು/ಸಂಶೋಧಕರನ್ನು ಉಪಯೋಗಿಸಿಕೊಂಡು ವೈದ್ಯಕೀಯ ಪ್ರಯೋಗವನ್ನು ನಡೆಸಿದಂತಹ ಆಧಾರಗಳಿಲ್ಲ ಅಥವಾ ಯು.ಎಸ್ ನ ಫುಡ್ ಅಂಡ್ ಅಡ್ಮಿನಿಸ್ಟ್ರೇಷನ್ ನಿಂದ ಮಾನ್ಯತೆಯು ಸಿಕ್ಕಿಲ್ಲ.

ಆದರೆ, 1985 ರಲ್ಲಿ ಯು. ಎಸ್ ನ ಡ್ರಗ್ ಎನ್ಫೋರಸ್ಮೆಂಟ್ ಅಡ್ಮಿನಿಸ್ಟ್ರೇಷನ್ MDMA ಅನ್ನು ವೈದ್ಯಕೀಯ ಚಿಕಿತ್ಸೆಯಲ್ಲಿ ಕಾನೂನುಬಾಹಿರ ಎಂದು ಆದೇಶಿಸಿತು. ಆದರೆ, ಕೆಲವು ಸಂಶೋಧಕರ ಪ್ರಕಾರ, ನಿಯಂತ್ರಿತ ಪರಿಸ್ಥಿತಿಗಳಲ್ಲಿ, ಮನೋ ವೈದ್ಯಕೀಯ ಚಿಕಿತ್ಸೆಗಳಲ್ಲಿ ಬಳಸಬಹುದು ಎಂಬ ವಾದವನ್ನು ಮುಂದಿಟ್ಟು ಡಿಸೇಸ್ ಇತ್ತೀಚಿನ ಬೆಳವಣಿಗೆಯಲ್ಲಿ ಪೋಸ್ಟ್ ಟ್ರೆಮಾಟಿಕ್ ಸ್ಟ್ರೆಸ್( PTSD) ಚಿಕಿತ್ಸೆಯಲ್ಲಿ MDMA ಯನ್ನು ಬಳಸಿ ಪ್ರಗತಿಯನ್ನು ಸಾಧಿಸಿ ಯಶಸ್ವಿಯಾಗಿ ಹೊಸ ಆಯಾಮವನ್ನು ತೆರೆದಿದ್ದಾರೆ.

‘MDMA’ ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳು

ಅತಿಯಾದ ಸೇವನೆಯಿಂದಾಗಿ ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗುವುದು, ದೇಹದ ಉಷ್ಣತೆಯು ಹೆಚ್ಚಾಗುವುದು, ಇದು ಯಕೃತ್ತು ಹಾಗೂ ಮೂತ್ರಪಿಂಡಗಳ ಕಾರ್ಯದಲ್ಲಿ ಅಡೆತಡೆಯನ್ನು ಉಂಟುಮಾಡಬಹುದು. ಕೆಲವೊಮ್ಮೆ ಅಸ್ವಾಭಾವಿಕ ಲೈಂಗಿಕ ಸಂಪರ್ಕ ಹೊಂದುವುದರಿಂದ, ಲೈಂಗಿಕ ಪ್ರಸರಣ ರೋಗ( STD) ಗಳಾದ ಗೊನೋರಿಯ,AID/HIV ಹಾಗೂ ಹೆಪಟೈಟಿಸ್ ನಂತಹ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಿದೆ.

MDMA ಡ್ರಗ್ ಒಂದು ವ್ಯಸನವೇ..?

ಸಂಶೋಧನೆಗಳ ಪ್ರಕಾರ ಇದು ವ್ಯಸನವೇ ಎಂಬುದು ಖಚಿತವಾಗಿಲ್ಲ. ಅಲ್ಲದೇ, ಇದು ಕೋಕೋ ನಷ್ಟು ಗೀಳಲ್ಲವೆಂಬುದು ಸಂಶೋಧಕರ ವಾದವಾಗಿದೆ. ಆದರೆ, ಕೆಲವು ವ್ಯಸನಿಗಳು ಆಯಾಸ ಖಿನ್ನತೆಗೆ ಒಳಗಾಗುವುದು, ಹಸಿವಿಲ್ಲದಿರುವುದು, ಏಕಾಗ್ರತೆಯಲ್ಲಿ ಕೊರತೆಯನ್ನು ಅನುಭವಿಸುವಂತಹ ಲಕ್ಷಣಗಳನ್ನು ತೋರುವುದು ಉಂಟು.

ವ್ಯಸನಿಗಳಿಗೆ ಬಳಸಬಹುದಾದ ಚಿಕಿತ್ಸೆ

ಇಂತಹದ್ದೇ ಚಿಕಿತ್ಸೆಯನ್ನು ಬಳಸಿ MDMAಡ್ರಗ್ ನಾ ಚಟದಿಂದ ವ್ಯಕ್ತಿಯೊಬ್ಬನನ್ನು ವ್ಯಸನಮುಕ್ತ ಗಳಿಸಬಹುದು ಎಂದು ಹೇಳುವಂತಹ ಯಾವುದೇ ಖಂಡಿತವಾದ ಚಿಕಿತ್ಸೆಯು ವೈದ್ಯಕೀಯ ಕ್ಷೇತ್ರದಲ್ಲಿಲ್ಲ. ಆದರೆ, ‘Behavioral Therapy’ /ನಡವಳಿಗೆ ಚಿಕಿತ್ಸೆಯು ಪರಿಣಾಮಕಾರಿ ಆಗಬಲ್ಲದು ಎಂಬ ನಂಬಿಕೆಗಳಿವೆ. ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬ ನಿಟ್ಟಿನಲ್ಲಿ ಸಂಶೋಧನೆಗಳು ಇನ್ನಷ್ಟೇ ನಡೆಯಬೇಕಿದೆ.

_ವೈಶಾಲಿ ದುರ್ಗಪ್ಪ

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು