ಲಕ್ನೋ (29-10-2020): 7 ಮಂದಿ ಬಿಎಸ್ಪಿ ಶಾಸಕರನ್ನು ಬಿಎಸ್ಪಿ ನಾಯಕಿ ಮಾಯಾವತಿ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ.
ರಾಜ್ಯ ಸಭಾ ಚುನಾವಣೆಗೆ ಬಿಎಸ್ ಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದ್ದ ರಾಮ್ ಜಿ ಗೌತಮ್ ಅವರನ್ನು ವಿರೋಧಿಸಿದ್ದ ಪಕ್ಷದ ಶಾಸಕರನ್ನು ಮಾಯಾವತಿ ಉಚ್ಛಾಟನೆ ಮಾಡಿದ್ದಾರೆ.
ಬಿಎಸ್ಪಿ ಶಾಸಕರಾದಂತ ಚೌಧುರಿ ಅಸ್ಲಂ ಆಲಿ, ಹಕೀಂ ಲಾಲ್ ಬಿಂಡ್, ಮಹ್ಮದ್ ಮುಜ್ತಾಬ್ ಸಿದ್ದೀಕಿ, ಅಸ್ಲಂ ರೈನಿ, ಸುಷ್ಮಾ ಪಟೇಲ್, ಹರ ಗೋವಿಂದ್ ಭಾರ್ಗವ್ ಹಾಗೂ ಬಂದನಾ ಸಿಂಗ್ ಅವರನ್ನು ಮಾಯಾವತಿ ಉಚ್ಛಾಟನೆ ಮಾಡಿದ್ದಾರೆ.