ಯಾಂಗೂನ್(01-02-2021): ಮ್ಯಾನ್ಮಾರ್ನಲ್ಲಿ ಸೇನಾ ದಂಗೆ ಹಿನ್ನೆಲೆಯಲ್ಲಿ ಒಂದು ವರ್ಷದವರೆಗೆ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಸೇನೆಯು ಯಾಂಗೂನ್ ನಗರದ ಸರ್ಕಾರಿ ಕಟ್ಟಡದ ಮೇಲೆ ನಿಯಂತ್ರಣ ಸಾಧಿಸಿದೆ. ಈ ಕುರಿತು ಸರ್ಕಾರಿ ದೂರದರ್ಶನದಲ್ಲಿ ಘೋಷಣೆ ಮಾಡಲಾಗಿದೆ. ಈ ಮೊದಲು ದೇಶದ ಪರಮೋಚ್ಚ ನಾಯಕಿ ಆಂಗ್ ಸಾನ್ ಸೂಕಿ ಅವರನ್ನು ಸೇನೆಯು ಬಂಧಿಸಿದ ನಂತರ ಅಲ್ಲಿ ದಂಗೆಯ ಲಕ್ಷಣಗಳು ಗೋಚರಿಸಿದ್ದವು.
ಸರ್ಕಾರಿ ಕಟ್ಟಡದ ಆವರಣದ ಒಳಗೆ ಐದು ಸೇನಾ ಟ್ರಕ್ಗಳು ಬೀಡುಬಿಟ್ಟಿದೆ, ಕರ್ತವ್ಯಕ್ಕೆ
ಹಾಜರಾಗುತ್ತಿರುವ ಸರ್ಕಾರಿ ನೌಕರರನ್ನು ಯೋಧರು ತಡೆಯುತ್ತಿದ್ದಾರೆ ಎಂದು ವರದಿಯಾಗಿದೆ.