ಸೌದಿ ಅರೇಬಿಯಾ: ಮೇ ತಿಂಗಳಲ್ಲಿ ‘ಸೌದಿಯಾ ಏರ್ ಲೈನ್ಸ್’ನ ಅಂತರಾಷ್ಟ್ರೀಯ ಸೇವೆ ಪುನರಾರಂಭ

Share on facebook
Share on twitter
Share on linkedin
Share on whatsapp
Share on telegram
Share on email
Share on print

ರಿಯಾದ್: ಬರುವ ತಿಂಗಳುಸೌದಿಯಾ ಏರ್ ಲೈನ್ಸ್‘(Saudia airlines) ತನ್ನ ಅಂತರಾಷ್ಟ್ರೀಯ ಸೇವೆಗಳನ್ನು ಪುನರಾರಂಭಿಸಲಿದೆ. ಅದಕ್ಕೆ ಬೇಕಾಗಿರುವ ಸಿದ್ಧತೆಗಳೆಲ್ಲವನ್ನೂ ಮಾಡಲಾಗುತ್ತಿದೆ ಎಂದು ಸೌದಿ ಸಾರಿಗೆ ಸಚಿವ ಸ್ವಾಲಿಹ್ ಅಲ್ಜಾಸರ್ ಹೇಳಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗವು ತೀವ್ರಗತಿಯಲ್ಲಿ ಏರುತ್ತಿದ್ದ ಹಿನ್ನೆಲೆಯಲ್ಲಿ 2020 ಮಾರ್ಚ್ ತಿಂಗಳಲ್ಲಿಸೌದಿಯಾ ಏರ್ ಲೈನ್ಸ್‘(Saudia airlines) ತನ್ನೆಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಿತ್ತು.

ನಂತರದ ದಿನಗಳಲ್ಲಿ ಅದು ಆಂತರಿಕ ವಿಮಾನಯಾನ ಸೇವೆಗಳನ್ನಷ್ಟೇ ನೀಡಲು ತೊಡಗಿತು. ಇದೀಗ ಮೇ ತಿಂಗಳ ಹದಿನೇಳನೇ ತಾರೀಕಿನಂದು ಅದು ಅಂತರಾಷ್ಟ್ರೀಯ ಸೇವೆಗಳನ್ನೂ ನೀಡಲು ಆರಂಭಿಸಲಿದೆ.

ಮೇ ಹದಿನೇಳರಿಂದ ಹೊರ ದೇಶದ ಪ್ರಯಾಣಿಕರು ಸೌದಿಗೆ ಪ್ರಯಾಣಿಸಲು ಅನುಮತಿ ಸಿಗಲಿದ್ದು, ವೇಳೆಗೆ ದೇಶವು ಸಹಜ ಸ್ಥಿತಿಗೆ ಬರಲಿದೆಯೆಂದು ಸೌದಿ ಗೃಹ ಸಚಿವಾಲಯವು ಮೊದಲೇ ತಿಳಿಸಿತ್ತು.

ಭಾರತದಂತಹ ಕೊರೋನಾ ಏರುಗತಿಯಲ್ಲಿರುವ ದೇಶಗಳಿಗೆ ಸೌದಿಯಾ ಏರ್ ಲೈನ್ಸ್ ಸೇವೆಗಳು ಲಭ್ಯವಾಗುವುದೇ ಎಂಬ ಬಗ್ಗೆ ಇನ್ನೂ ಯಾವುದೇ ಸ್ಪಷ್ಟತೆ ಮೂಡಿಲ್ಲ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು