ಮಂಗಳೂರು(25/10/2020): ಬಶೀರ್ ಅಹ್ಸನಿ ತೋಡಾರ್ ಉಸ್ತಾದರ ನೇತೃತ್ವದ ಇಸ್ಲಾಮಿಕ್ ವೇ ತಂಡದ ವತಿಯಿಂದ ಮಂಖೂಸ್ ಮೌಲೀದ್ ಇದರ ಕನ್ನಡ ಇಂಗ್ಲೀಷ್ ಅನುವಾದವನ್ನೊಳಗೊಂಡ ಆ್ಯಪ್ ಅನ್ನು ಉಡುಪಿ, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಮೌಲಾನ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದರು ಬಿಡುಗಡೆಗೊಳಿಸಿದರು.
ಈ ಆ್ಯಪ್ ಮೌಲೀದ್ ನ ಕನ್ನಡ ಮತ್ತು ಇಂಗ್ಲಿಷ್ ಅರ್ಥ, ಪ್ರಖ್ಯಾತ ಹಾಡುಗಾರರಿಂದ ಹದೀಸ್ ಪಾರಾಯಣ, ಬೈತ್ ಆಲಾಪನೆ ಇತ್ಯಾದಿ ವಿಶೇಷತೆಗಳನ್ನು ಒಳಗೊಂಡಿದೆ.
ಈ ಆ್ಯಪ್ ಅನ್ನು ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.
*ಆಂಡ್ರೊಯ್ಡ್ ಬಳಕೆದಾರರು ಈ ಲಿಂಕ್ ಬಳಸಿ:*
*iOS ಬಳಕೆದಾರರು ಈ ಲಿಂಕ್ ಬಳಸಿ:*