ಮತ್ತೊಮ್ಮೆ ಲಾಕ್ ಡೌನ್ ಮಾಡುವುದು ಸೂಕ್ತ : ಹೆಚ್ ಡಿ ಕುಮಾರಸ್ವಾಮಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತೊಮ್ಮೆ ಲಾಕ್ ಡೌನ್ ಮಾಡುವುದು ಸೂಕ್ತ ಎಂದು ಹೇಳಿದರು.ಕೊರೋನಾ ಎರಡನೇ ಅಲೆ ಜೋರಾಗ್ತಿದೆ.ರಾಜ್ಯದ ಜನತೆ ಜಾಗೃತಿಯಲ್ಲಿರಬೇಕು. ಸರಕಾರದ ನಿಯಮ,ಕಾರ್ಯಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

“ಜನರು ಭೀತಿಯನ್ನು ತೊರೆದು ಜಾಗೃತಿಯ ಕಡೆ ಗಮನವಹಿಸ ಬೇಕಾಗಿದೆ.ನಾನೂ ಕೂಡ ದಿನಾಲೂ ಪ್ರಯಾಣ ಮಾಡುತ್ತಿದ್ದೇನೆ.ನನಗೂ ತುಂಬಾ ಜನರ ಸಂಪರ್ಕ ಇದೆ.ದೇವರ ದಯೆಯಿಂದ ಏನೂ ಅನಾಹುತ ಸಂಭವಿಸಿಲ್ಲ.ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಜನರು ಕಟ್ಟೆಚ್ಚರದಿಂದ ಇರಬೇಕು” ಎಂದು ರಾಜ್ಯದ ಜನತೆಗೆ ಎಚ್ಚರಿಸಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು